Friday, April 23, 2010

Tiru nakshatra - shree Ramaanujaachaarya's Paadukaas visit the Mandir.ಶ್ರೀ ತಿರುಮಲ ತಿರುಪತಿ ದೇವಸ್ಥಾನದ  ಆಳ್ವಾರ್ ದಿವ್ಯ ಪ್ರಭಂದ ಪ್ರಾಜೆಕ್ಟ್ ನ ಆಶ್ರಯದಲ್ಲಿ ಶ್ರೀ ಮಂದಿರದಲ್ಲಿ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಯನ್ನು ತಾ: 21-4-2010 ರಂದು ಆಚರಿಸಲಾಯಿತು.
ಉಭಯ ವೇದಾಂತ ಪ್ರವರ್ತಕ ಶ್ರೀ ತಿರುಸ್ವಾಮಿಗಳು ಶ್ರೀ ರಾಮಾನುಜಾಚಾರ್ಯರ ದಿವ್ಯ ಪಾದುಕೆಗೊಂದಿಗೆ ಆಗಮಿಸಿ 'ಶ್ರೀ ರಾಮಾನುಜ ಅವತಾರ ವೈಭವ' ಎಂಬ ಪ್ರವಚನ ಮಾಡಿದರು. ಶ್ರೀ ರಾಮಾನುಜರ ಸಮಾಜೋದ್ಧಾರ ಕುರಿತು ಶ್ರೀ ರಮೇಶ್ ಭಟ್ ರವರು ಮಾತನಾಡಿದರು.
ಅಂದು ಸಂಜೆ ಶ್ರೀ ಬಿ. ಶ್ರೀರಾಮಮೂರ್ತಿ ರವರಿಂದ 'ಕರ್ನಾಟಕಕ್ಕೇ ಶ್ರೀ ರಾಮಾನುಜಾಚಾರ್ಯರ ಕೊಡುಗೆ', ನಂತರ ಶ್ರೀ ಜಿ.ಹೆಚ್. ವೆಂಕಟೇಶ್ ಮೂರ್ತಿ ರವರಿಂದ 'ಶ್ರೀ ರಾಮಾನುಜಾಚಾರ್ಯರ ಶರಣಾಗತಿ ತತ್ವ ' ವಿಷಯವಾಗಿ ಉಪನ್ಯಾಸಗಳು ಜರುಗಿದವು.