Sunday, September 28, 2008

ಮೋಕ್ಷ ಪ್ರಾಪ್ತಿಯ ಗುಟ್ಟು

Sri Brahmanand Maharaj
ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು.

ಪರಮಪ್ರಾಪ್ತಿ ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು. ಅಹೇತುಕ ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥಾರಾಗಬೇಕು. ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ, ರಾಮನಾಮ ಸ್ಮರಣದ ಹೊರತು ಎರಡನೇ ಉಪಾಯವಾವುದೂ ಇಲ್ಲ. ಆಯುಷ್ಯದ್ದು ಭರವಸೆ ಇಲ್ಲ. ಆದಷ್ಟು ತೀವ್ರವಾಗಿ ಕೃತಾರ್ಥವಾಗಲಿಕ್ಕೆ ಪ್ರಯತ್ನ ಮಾಡಬೇಕು. ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ. ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು. ಸಾಧು ಸಂಗತಿಯಿಂದ ಕ್ಷಮಾ, ಭೂತದಯಾ, ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವ್ರುತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗಗಳು ಪ್ರಯತ್ನ ಮಾಡದಲೇ ದೊರೆಯುತ್ತವೆ. ಕಾಮ ಕ್ರೋಧಾದಿ ಷಡ್ವೈರಿಗಳೂ, ಪಾರಮಾರ್ಥಕ್ಕೆ ವಿಘ್ಹ್ನ ಮಾಡತಕ್ಕಂಥ ದಂಭ ಅಹಂಕಾರಾದಿಗಳೂ ತಮ್ಮಷ್ಟಕ್ಕೆ ತಾವೇ ಲಯಹೊಂದುತ್ತವೆ. ಸಾಧು ಸಂಗತಿ ಮಹಿಮಾ ಅಗಾಧವದೆ. ಸಾಧುಗಳಲ್ಲಿ ಸದೋದಿತ ಭಗವಚ್ಚರ್ಚಾ, ಭಗವದ್ಗುಣಾನುವರ್ಣನ, ರಾಮನಾಮಸ್ಮರಣ, ಸದೋಪದೇಶ, ಅಹೋರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತನಾಗುತ್ತಾನೆ.ವಿಷಯಾಕಾರವೃತ್ತಿಯಿಂದ ಬಂಧಾ, ಪರಮಾತ್ಮಕಾರವೃತ್ತಿಯಿಂದ ಮೋಕ್ಷಾ. ವೃತ್ತಿಗೆ ವಿಷಯದ ಸಂಬಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ. ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದಕಡೆ ಹೋಗಲಿಕ್ಕೆ ವೃತ್ತಿಗೆ ಸವಡ ಕೊಡಬಾರದು. " ಹೇ ರಾಮಾ, ಹೇ ದಯಾನಿಧೇ! ನನ್ನ ಎಂದ ಉದ್ಧಾರ ಮಾಡುವಿ. ನಿನ್ನ ಸಗುಣಮೂರ್ತಿ ಎಂದ ಕಂಡೇನು; ರಾಮಾ ತೀವ್ರ ದರ್ಶನ ಕೊಡೋ! ನಿನ್ನ ದರ್ಶನ ಆಗದ ಹೊರತು ಚೈನ ಇಲ್ಲ. ರಾಮಾ ನಾನು ಅಗಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ. ಹೇ ದಯಾಸಮುದ್ರ, ರಾಮಾ, ತೀವ್ರವಾಗಿ ಭವಸಮುದ್ರವನ್ನು ದಾಟಿಸು. ಸಂತತಿ ಸಂಪತ್ತಿ ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ. ನಿನ್ನ ಪಾದದಲ್ಲಿ ದೃಡ ಭಕ್ತಿ ಕೊಡು. ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ. ಕಿವಿಗಳು ರಾಮ (ನಿನ್ನ) ಕಥಾ ಕೇಳಲಿ. ಮಸ್ತಕವು ರಾಮ (ನಿನ್ನ) ಪಾದಕ್ಕೆ ಸಾಷ್ಟಾಂಗ ಹಾಕಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸ್ಸಮ್ಮಾರ್ಜನಾದಿ ಸೇವಾ ಘಡಾಯಿಸಲಿ. ರಾಮಾ, ನಾನು ಅಜ್ಞಾನಿ ಇದ್ದೇನಿ. ಏನೂ ತಿಳುವಳಿಕೆಯಿಲ್ಲ. ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. ಶ್ರೀ ರಾಮಾ, ನಿನ್ನ ಹೊರತು ನನಗೆದಾರೂ ಆಧಾರ ಇಲ್ಲ. ನೀನೇ ತಂದೆ ತಾಯಿ ಬಂಧು ಬಳಗಾ. ಹೇ ಕೃಪಾಸಾಗರಾ, ಶ್ರೀರಾಮಾ, ಅಜ್ನಾನಧ್ವಾಂತ ನಿವಾರಣಾ, ನೀನೇ ಗತಿ ಎಂದು ಅನನ್ಯಭಾವದಿಂದ ಶರಣ ಹೋಗಬೇಕು. ಸಹಸಾ ಪಾಪಮರ್ಗದ ಕಡಿ ಪ್ರವೃತ್ತಿ ಇರಬಾರದು. ಸುಳ್ಳು ಕೆಲಸಕ್ಕೆ ಹೋಗಬಾರದು. ಜನರು ನಿಂದಾ ಮಾಡಿದರೆ ವಿಷಾದಪಡಬಾರದು. ಸ್ತುತಿ ಮಾಡಿದರೆ ಹರ್ಷಪಡಬಾರದು. ಜನರ ನಿಂದಾ-ಸ್ತುತಿ ಮಾಡಬಾರದು. ಸರ್ವತ್ರದಲ್ಲಿ ಪರಮಾತ್ಮ ಇದ್ದಾನ. ಹೆಂಡರು ಮಕ್ಕಳು, ಮನಿ, ಹೊಲಾ, ಸಂಪತ್ತಿ ಮೊದಲಾದ ದೃಶ್ಯಪದಾರ್ಥ ಮಿಥ್ಯಾ ಎಂದು ತಿಳಿಯಬೇಕು. ದೇವರು ಒಬ್ಬನೇ ಶಾಶ್ವತಾ. ಅಹೋರಾತ್ರಿ ರಾಮಭಜನೆಯಲ್ಲೇ ಕಾಲಕ್ರಮಣ ಮಾಡಬೇಕು. ಜಯ ಜಯ ರಘುವೀರ ಸಮರ್ಥ.

Wednesday, September 24, 2008

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿಕೊಟ್ಟ ಒಂದು ಭಜನೆ.

ರಾಮ ರಾಮ ರಾಮ ಸೀತಾ ರಾಮ ರಾಮ ಅನ್ನಿರಿ, ರಾಮಸ್ಮರಣೆಯ ಹೊರ್ತುಕಾಲ ವ್ಯರ್ಥ ಕಳೆಯಬೇಡಿರಿ.
ಸ್ನಾನಸಂಧ್ಯಾ ನಿತ್ಯನೇಮ ಜಪವತಪವನು ಮಾಡಿರಿ, ಸಾಯೋಸಂಕಟ ಬಂದರೂ ಪರಧರ್ಮ ಹಿಡಿಯಬೇಡಿರಿ.
ತಂದೆ ತಾಯಿ ಬಂಧು ಬಳಗವು ಮಿಥ್ಯವೆಂದು ತಿಳಿಯಿರಿ, ನಂದು ನಾನೆಂದೆಂಬ ಮೋಹವ ಬಿಟ್ಟು ರಾಮನ ಭಜಿಸಿರಿ.
ಕಾಮ ಕ್ರೋಧ ಮೋಹ ಬಿಟ್ಟು ಮನಸು ಜಳಜಳಮಾದಿರಿ, ಕಾಯವಾಚ ಮನಸಿನಿಂದ ಗುರುವಿಗೆ ಶರಣ್ಹೋಗಿರಿ.
ಪರರನಾರಿ ಪರರದ್ರವ್ಯ ನರಕವೆಂದು ತಿಳಿಯಿರಿ, ಚಿಂತೆಯಿಲ್ಲದೆ ರಾಮಚಿಂತಿಸಿ ಜನನ ಮರಣವ ನೀಗಿರಿ.
ಭಕ್ತಿಭಾವದಿಂದ ಸದ್ಗುರು ಹರಿಯು ಹರನೆನ್ದರಿಯಿರಿ, ಗುರುವಿನಪ್ಪಣೆಯಂತೆ ನಡೆದರೆ ಮುಕ್ತಿಯೆಂದು ತಿಳಿಯಿರಿ.
ದಿವಸರಾತ್ರೆ ಸಾಧುಸಂತರ ಸಂಘವನ್ನೇ ಬಯಸಿರಿ, ಬ್ರಹ್ಮಾನಂದರು ಸಾರಿಹೇಳುವ ರಾಮನಾಮವ ಜಪಿಸಿರಿ.
.

Sunday, September 21, 2008

ಶ್ರೀ ಮಹಾರಾಜರ ಪ್ರವಚನ-ಸೆಪ್ಟೆಂಬರ್ ೨೨.


Devotion is only Intense Love for God

In a big machine, when one wheel turns, all other wheels start their motions, slow or fast according to their assigned functions. Our mind also works similarly. When one faculty of the mind starts functioning, all other faculties also begin to function. It is very difficult to control the mind; that is possible only for a great man. Mercury is visible if kept before you, but you cannot strike it with a stick. Similarly, you can feel the existence of the mind but can't control it. Therefore you should surrender to God. You have to clean the mirror when it becomes dirty. Cleaning of the mind requires some discipline. Very tasty condiments are prepared by properly mixing correct quantities of chillies, salt, pepper etc. For the attainment of God, three items are required, namely, good behaviour, purity of mind and chanting of nama. Good behaviour implies honesty, righteous actions, and moral behaviour; purity of mind implies non-existence of pride, envy or hatred and praying God for every one's happiness; chanting of nama implies not forgetting God even for a moment. A wife need not forsake nama though her husband may dislike God; it does not amount to disloyalty to him.
Stray thoughts arising in the mind obstruct love for nama; the remedy is not to pay attention to them. One police officer was very efficient in apprehending thieves. He used to find out the woman whose house the thief frequented and saw to it that the woman betrayed the thief. Similarly, find out where our mind gets attached, and place God there; with this you can certainly control your mind. There are two ways to regulate mind; Patanjal Yoga and Bhakti Yoga. The former consists of regulation of diet and physical activity and control of sense organs. Bhakti implies intense love for God. The means for creating such love consists of chanting of nama, propagating His praise and stories, association with saints and the most important, the grace of a sadguru. Actions in forgetfulness of God are bad actions. Make it a habit to utter nama whenever you eat or drink anything. Do not deviate from remembrance of God under any circumstances. Whoever conducts his family life in the remembrance of God, will have his pride destroyed, and he will be blessed with contentment and happiness.

* * * * *

Friday, September 19, 2008

ಶ್ರೀ ರಾಮ ಸಮರ್ಥ
ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರ , ಚಿಂತಾಮಣಿ.-೫೬೩೧೨೫.
ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ ಮತ್ತು ಶರನ್ನವರಾತ್ರಿ ಉತ್ಸವ.

ಶ್ರೀ ಮಂದಿರದಲ್ಲಿ ದಿನಾಂಕ ೨೯-೦೯-೦೮ , ಸೋಮವಾರ, ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ.
ಪ್ರಾತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ೯=೩೦ ರಿಂದ ೧೦-೨೫ ರವರೆಗೆ ಸಾಮೂಹಿಕ ಜಪಾನುಷ್ಟಾನ. ೧೦.೩೦ ರಿಂದ ೧೧.೩೦: ಪಂಡಿತ್ ಶ್ರೀ ಜಿ. ಜೈರಾಮ್ ಅವರಿಂದ ಉಪನ್ಯಾಸ. ವಿಷಯ: ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರು. ಸಂಜೆ ೬-೦೦ ಕ್ಕೆ ಶ್ರೀ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣ, ೬.೪೫ ರಿಂದ ಸಾರ್ವಜನಿಕರಿಂದ ಗಾಯನ ಸೇವೆ.
ದಿನಾಂಕ ೩೦-೦೯-೦೮ ಮಂಗಳವಾರದಿಂದ ದಿನಾಂಕ ೯-೧೦-೦೯,ಗುರುವಾರದವರೆಗೂ ಶರನ್ನವರಾತ್ರಿ ಉತ್ಸವ.
ಪ್ರತಿ ದಿನ,
ತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ಸಂಜೆ ೬.೦೦ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ.
ಶ್ರೀ ಬಿ. ಶ್ರಿರಾಮಮುರ್ತಿ ರವರಿಂದ 'ಶ್ರೀಮದ್ವಾಲ್ಮಿಕಿ ರಾಮಾಯಣ" ಪಾರಾಯಣ.
ಪಂಡಿತ್ ಶ್ರೀ ಜಿ.ಜೈರಾಮ್ ರವರಿಂದ 'ಶ್ರೀ ರಾಮಚರಿತ ಮಾನಸ" ಪಾರಾಯಣ.
ಶ್ರೀ ಹೆಚ್.ಆರ್. ನಾಗರಾಜ್ ರವರಿಂದ ಸೂರ್ಯ ನಮಸ್ಕಾರ.
; ೩೦.೯.೦೮ ಬೆಳಿಗ್ಗೆ:.೧೦.೩೦ ರಿಂದ ೧೧.೩೦ ರವರೆಗೆ ಶ್ರೀ ಅನಂತ ಶಾಸ್ತ್ರಿಯವರಿಂದ "ಶರನ್ನವರಾತ್ರಿ" ಉಪನ್ಯಾಸ.
ನಾಂಕ ೧.೧೦.೦೮ ರಿಂದ ೭.೧೦.೦೮ ರವರೆಗೆ ಪರಮಪುಜ್ಯ ಶ್ರೀ ನಾಮದೆವಾನಂದ ಭಾರತಿ ಸ್ವಾಮಿಯವರಿಂದ ಪ್ರವಚನ.
ಬೆಳಿಗ್ಗೆ:೧೦.೩೦ - ೧೧.೩೦. ವಿಷಯ: ಜ್ಞಾನೇಶ್ವರಿ.
ಸಂಜೆ 6.45 ರಿಂದ 8.೦೦- ವಿಷಯ : ಏಕನಾಥಿ ಭಾಗವತ

ದಿನಾಂಕ ೮-೧೦-೦೮. ಸಂಜೆ ೬-೪೫ ಕ್ಕೆ " ಸೀತಾ ಕಲ್ಯಾಣೋತ್ಸವ" ಮತ್ತು ದಿನಾಂಕ ೯-೧೦-೦೮ ಬೆಳಿಗ್ಗೆ ೧೦=೦೦ಕ್ಕೆ"

"ಶ್ರೀ ರಾಮ ಪಟ್ಟಾಭಿಷೇಕ".

ಸಂಜೆ ೭-೩೦ ಕ್ಕೆ ಪ್ರಾಕಾರೋತ್ಸವ. ೮-೦೦ಕ್ಕೆ ಶಮಿಪೂಜೆ.

ಆಸ್ತಿಕ ಮಹಾಶಯರು ಎಲ್ಲಾ ಕಾರ್ಯಕ್ರಮಗಲ್ಲಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಗವತ್ಕ್ರುಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಇಂತಿ ಸಜ್ಜನ ವಿಧೇಯ

ಜಿ.ಹೆಚ್. ವೆಂಕಟೇಶಮೂರ್ತಿ,

ಅಧ್ಯಕ್ಷರು, ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮಮಂದಿರ್ ಟ್ರಸ್ಟ್.

Friday, September 12, 2008

Sri Brahmananda Maharaj

Most prominent among the disciples of Gondavalekar Sadguru Sri Brahmachaithanya Maharaj.

Sri Anantha Shastry,great Sanskrit scholar. with an intense desire to get a spiritual Guru, went to different places in search of the Guru. He had a dream that the Guru was then in Indore. Anantha Shastry went there and saw a saint surrounded by women, men and children discussing worldly problems. He was disappointed and returned to Venkatapur where he did penance . Then again he had a dream that he has missed his Guru at Indore. So, he went back to Indore.There he met Sri Brahmachaithanya Maharaj and surrendered himself to Him. Sri Maharaj asked him to do Sadhana on the banks of Narmada river. The food was just leaves and water. During his samadhi many snakes surrounded him. After the attainment of self-realization, he went to meet Sri Maharaj in Gondavali. Sri Maharaj deputed him to spread Ram-Nam in Gadag and Dharwar. He built Rama Mandir in Beldadhi. and at many other places. He had a large following of devotees. But, he knew no other God than Sri Maharaj and spread his message in Karnataka as no one else has done. He departed from his body in 1918 when he was 60 years old. His Aradhana is held on Bhadrapada Bahula Amavasya every year at all the Mandirs of Sri Maharaj.

His aradhana will be held on 29-9-08 this year.

Saturday, September 6, 2008


महाराजांसमान नाही त्रिभुवनी आनंदाची खाणी गुरुराव

गुरुराव माझॆ रामचि केवळ वासनेचे मूळ दूर कॆले .

दूर कॆला भव कृपादृष्टिपातॆ मायापाशभूते पळविलि.

पळविली भ्रंति राहॊनिया चित्ती ब्रह्मानंद स्तुति काय करूं.

Friday, September 5, 2008

Sri Brahmachaitanya Sri Rama Mandir, Chintamani


Sri G. Venkannaiah, a direct disciple of Sri Brahmachaithanya Maharaj, who was called to Gondavale by Sri Maharaj during 1913,was initiated to Sri Rama Nama by Sri Maharaj himself and asked him to do: 1. Do Namasmarana without break. 2.Spread or propagate Rama-Nama. 3. Construct a small Mandir (of Sri Rama). 4. Carry on Upasana.
As Sri G.Venkannaiah was in government service with frequent transfers from place to place, he could not immediately carry out Sri Maharaj's order of constructing a Mandir immdiately. However Sri Maharaja's other orders were carried out wherever Sri G.Venkannaiah was during his service. After retirement, he bought a site for the Mandir in Chintmani, which is near his native place Ganjur. In 1939 A hut like structure was constructed and photos of Sri Ram and Sri Maharaj with Sri Maharaj's Padukas were kept, and regular pujas were carried out starting from Kakadarathi upto Shayanotsav. Regular Nama Japa was carried on.
The marble idols of Sri Brahmachiathanya Maharaj with Sri Ram, Sri Lakshman, Sri Sita Devi, and Sri Maruthi were installed on June 13,1949 . Sri Tatya Saheb Ketkar Maharaj, Sri Kundagol Naranappa Maharaj, Prof. K.V.Belsare and innumerable devotees from Maharashtra and Karnataka were present on the Occasion.

Bhajan

भजरॆ गुरुदॆवं हॆ मानस भजरॆ गुरुदॆवंभज गुरुदॆवं भजकर प्रॆमंनिजपददायक सुजनॊध्धारंभजरॆ गुरुदॆवं हॆ मानस भजरॆ गुरुदॆवं.
भ्र्ह्मचैतन्यं भ्र्ह्मानंदं भ्रह्मंडनायक भ्रह्मस्वरूपंभजरॆ गुरुदॆवं हॆ मानस भजरॆ गुरुदॆवं.
भवभयहारं भुवनॊध्धारंकलिमनतॊशक पावन मूर्तिंभजरॆ गुरुदॆवं हॆ मानस भजरॆ गुरुदॆवं
भयहरवीरं जयकर शूरं जय रामचंद्र विटलन दासंभजरॆ गुरुदॆवं हे मानस भजरॆ गुरुदेवं.