
ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ 95 ನೆಯ ಆರಾಧನಾ ಮಹೋತ್ಸವದ ಸವಿನೆನಪಿಗಾಗಿಶ್ರೀ ವೈ.ಜಿ. ಗಿರಿಶಾಸ್ತ್ರಿಯವರು ರಚಿಸಿದ ಗೀತೆ.
ಶ್ರೀರಸ್ತು
ಮೊರೆ
ಎಷ್ಟು ದಿನ ಈ ತೆರದಿ ಮೌನದಿಂದಿರುವೆ //ಪ//ಕಷ್ಟಗಳ ನಾ ಸಹಿಸೆ ದಯತೋರು ಗುರುವೇ //ಅ//
ಬಿಳಿಯ ಶಿಲೆಯಲಿ ಕುಳಿತು ಏಕಿಂತು ಪರಿಕಿಸುವೆ? ಬಳಲುತಿರುವೆನು ಸ್ವಾಮಿ ಈ ಭವದ
ಬೇಗೆಯಲಿಸುಲಭ ನೀನೆನ್ನುವರು ಎನಗೇಕೆ ದುರ್ಲಭನು?
ಒಲವ ಧಾರೆಯನೆರೆದು ಸಲಹೆನ್ನ ಸದ್ಗುರುವೇ //
ಕರುಣಾಳು ಗುರುದೇವ ಕರೆದೊಡನೆ ಕನಿಕರಿಸು//
ಕರಪಿಡಿದು ಕಾಪಾಡು ನಿನ್ನಲ್ಲಿ ಮೊರೆಯಿಡುವೆ//
ತೊರೆಯದಿರು ಕಂದನನು ಕಡೆಗಣಿಸದಿರು ತಂದೆ//
ಚರಣಗಳ ಹಿಡಿದಿರುವೆ ಸಂತೈಸು ಸಂತಸದಿ//
ನೀನೆನಗೆ ಅಧಿದೈವ ನೀನಗೆ ಸರ್ವಸ್ವನೀನೆನ್ನ ಬಾಳ ಪಯಣಕೆ ದಿವ್ಯ ಬೆಳಕು//
ನೀನು ಪಾವನಚರಿತ ಎನ್ನ ಹರಸೈ ಪ್ರಭುವೇ
ಭಾನು ತೇಜೋಮೂರ್ತಿ ಶ್ರೀ ಬ್ರಹ್ಮಚೈತನ್ಯ//
- ವೈ. ಜಿ. ಗಿರಿಶಾಸ್ತ್ರಿ.