Wednesday, January 16, 2013

kannada bhajan-by Sri Shankara Shastry

 A Prayer by Late Hari katha Vidwan Sri Shankara Shasstry, which is sung occasionally in the Mandir.
       
       Sri Rama Samarthaಬಾರೋ ಶ್ರೀ ಬ್ರಹ್ಮಚೈತನ್ಯ ದೇವಾ , ಬಾರೋ ರಾವುಜಿ ಪ್ರಿಯಕುವರಾ।
ಬಾರಿಬಾರಿಗೂ ಭಾಗ್ಯವ ಕೊಡುತಲಿ ಭಕ್ತರ ಪೊರೆಯುವ ಗುರುವಾರ ಬಾ ।

 ನೊಂದೆನೈ ಭವಭಂದನದೊಳುಸಲೆ ಚಂದವೇನು ಕೇಳ್  ನಿರ್ದಯವೋ
ಮಂದ ಭಾಗ್ಯನಾ ಕಾಯೈ ನೀ  ಆಪದ್ಭಾಂಧವನಲ್ಲವೇ ಗುರುವಾರ ಬಾ ।।

ನಂಬಿದೆ ನಿನ್ನ ಸುಂದರ ಪಾದವ ಅಂಬುಜನಾಭನ ಬಿಡದಿರುವೇ
ಕಾಂಬೆಗೆಂದಿಗೊ ನನ್ನನು ಗುರುವರ ಬೆಂಬಿಡಬೇಡವೈ ಕರಮುಗಿವೇ  ।

ಬೇಡುವೆ ವರ ತಾರಕ ಮಂತ್ರವ ನೀಡು ಮರೆಸದೆ ಘನ ಮಹಿಮಾ
ಮಾಡು ಕೃಪೆಯನು ಬಾಲ ಶಂಕರ ಪಾಡಿ ನಲಿಯುವಾ ಗುರುವರ  ಬಾ ।।