Wednesday, July 31, 2013

Satsang a day

ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ನೂರನೇ ಆರಾಧಾನಾ ವರ್ಷ 

2013 ನೂರನೇ ಆರಾಧನಾ ವರ್ಷ. ಜೊತೆಗೆ ಶ್ರೀ ಮಹಾರಾಜರು ಶ್ರೀ  ವೆಂಕಣ್ಣಯ್ಯ ನವರಿಗೆ ದರ್ಶನಕೊಟ್ಟು ಗೋಂದಾವಳಿಗೆ ಕರೆಸಿಕೊಂಡು ಅನುಗ್ರಹ ನೀಡಿ ಹರಸಿ ಕಳುಹಿಸಿದ ನೂರನೇ ವರ್ಷವೂ ಆಗಿದೆ. ಚಿಂತಾಮಣಿಯ ಮಂದಿರದ ಭಕ್ತರಿಗೆ ಇದು ಒಂದು ವಿಶೇಷ.  ಅದಕ್ಕಾಗಿ, ಧ್ಯಾನಮಂದಿರದಲ್ಲಿ ಪೂಜ್ಯ ವೆಂಕಣ್ಣಯ್ಯನವರ ಒಂದು ವಿಗ್ರಹವನ್ನು ಸ್ಥಾಪಿಸಲಾಗಿದೆ.  ಅದಲ್ಲದೆ, ಪ್ರತಿ ದಿನವೂ, ದಿನಕ್ಕೊಬ್ಬ  ಭಕ್ತರ ಮನೆಗೆ ಶ್ರೀ ಗುರು ಪಾದುಕೆಗಳೊಂದಿಗೆ ಹೋಗಿ ಅರ್ಧ ಘಂಟೆ ಅನುಷ್ಠಾನ ಮಾಡಿಬರುವ ಸಂಕಲ್ಪ ಮಾಡಿ, ಈಗಾಗಲೇ, ನೂರು ಮನೆಗಳಿಗೂ ಮೀರಿದೆ. ಊರಿನ ಭಕ್ತರ ಪ್ರೋತ್ಸಾಹ , ಈ ವರ್ಷದ ಕೊನೆಯವರೆಗೂ , ದಿನಕ್ಕೊಬ್ಬರ ಮನೆಯಂತೆ, ಸತ್ಸಂಗ  ನಡೆಸಬೇಕೆಂಬ  ಮನಸ್ಸನ್ನು ನೀಡಿದೆ.  


Sri Sadguru Brahmachaitanya Maharaja's centennary Aradhana year - 2013.

2013 is the 100th Aradhana Year. This is also 100th year of the divine incident of Sri Maharaj appearing before Sri Venkannaiah in Malligere and asking him to go to Gondavale. Subsequently, this is the 100th year of Sri Maharaj initiating Sri Venkannaiah with tharak nam, asking him to construct a Ram Mandir and propagate Ram-nam.
To comemmorate this event, an idol of Sri G.Venkannaiah is installed in the Dhyana Mandir. Also, it was proposed to do Satsang at a devotee's house every day. Now, anushthan has beeen carried out in more than hundred houses, and it is hoped to continue this till the end of this year.