Showing posts with label ಭಕ್ತಿ ಗೀತೆ. Show all posts
Showing posts with label ಭಕ್ತಿ ಗೀತೆ. Show all posts

Tuesday, February 15, 2011

Shri Maharaja's Jayanthi (15-23-2011)

Sri Brahmachaithanya Maharaja's jayanthi (15-2-2011)
ಈ ದಿನ ( ಮಾಘ ಶುದ್ಧ ದ್ವಾದಶಿ ) ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ಜಯಂತಿಯನ್ನು ಶ್ರೀ ಗುರುಭಕ್ತರೆಲ್ಲರೂ ಭಕ್ತಿ ಶ್ರದ್ಧೆಯಿಂದ ಆಚರಿಸುವರು 
ಶ್ರೀ ಮಹಾರಾಜರ ಅನನ್ಯ ಭಕ್ತರಾದ ದಿ|| ಶಂಕರ ಶಾಸ್ತ್ರಿಗಳು ರಚಿಸಿದ ಒಂದು ಗೀತೆಯನ್ನು ಇಲ್ಲಿ ಕೊಟ್ಟಿದೆ.


ಬಾರೋ ಬಾರೋ ಬ್ರಹ್ಮಚೈತನ್ಯ|
ಶ್ರೀ ತುಳಸೀ ಮಣಿಹಾರನೆ ನೀ ಬಾ |
ಗೀತಾಬಾಯ್ ಸುಕುಮಾರನೆ ನೀ ಬಾ |
ಮಾತೃ ವಾಕ್ಯ ಪರಿಪಾಲನೆ ನೀ ಬಾ |
ಪ್ರೀತಿಲಿ ಭಕ್ತರ ಪೊರೆವನೆ ನೀ ಬಾ |
ದಯಾಮಯಾ | ದಯಾಮಯಾ ||
ಶಂಕರನುತ ಸದಯ ಪದಯುಗ ನಂಬಿದೆ, ನೀ ಕೊಡು ಅಭಯ |
ಆದರಿಸೈ ಕೃಪೆ  ತೋರುವ ಸಮಯ | ಮುದದಿಂದ ಗೊಂದಾವಲಿ ಪ್ರಿಯ || ಬಾರೋ ||


.

Friday, August 20, 2010

Baarayya Gurudeva a kannada bhajan by Shri G.H. Venkatesh Murthy


The following is an audio rendition of a Kannda bhajan: Baarayya Gurudeva
Lyrics by: Poojya Shri Y.S.Gundappa
Music Composed by:  Sri B.V. Balasai
Sung by: Shri G.H.Venkatesh Murthy.

ರಚನೆ: ಪೂಜ್ಯ ಶ್ರೀ ವೈ.ಎಸ್.ಗುಂಡಪ್ಪನವರು
ಹಾಡಿದವರು: ಶ್ರೀ ಜಿ.ಎಚ್.ವೆಂಕಟೇಶ ಮೂರ್ತಿ
ಸಂಯೋಜನೆ: ಶ್ರೀ ಬಿ.ವಿ.ಬಾಲಸಾಯಿ


ಈ ಭಜನೆ ಮತ್ತು ಇನ್ನೂ ೧೩ ಭಜನೆಗಳಿರುವ "ಚೈತನ್ಯ ಸ್ಮರಣಂ" ಸಿ.ಡಿ.ಯನ್ನು ಪಡೆಯಲು ಆಸಕ್ತ ಭಕ್ತರು
ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಮಂದಿರ, ಎನ್.ಆರ್.ಎಕ್ಸ್‌ಟೆನ್ಷನ್,
ಚಿಂತಾಮಣಿ, ಕರ್ನಾಟಕ 563125
ಟೆಲೆಫೋನ್: 988 00 60440, 988 02 18777

ಅನ್ನು ಸಂಪರ್ಕಿಸಬಹುದು.


(Please click on the Play button - the triangle one - below)


Tuesday, March 16, 2010

ಭಜನೆ: ಶ್ರೀ ಗುರು ಬ್ರಹ್ಮಚೈತನ್ಯ - ಚೈತನ್ಯ ಸ್ಮರಣಂ ಸಿ.ಡಿ.

ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ||

ನಿತ್ಯ ನಿರಂಜನ|ಸತ್ಯ ಸ್ವರೂಪ| ಭಕ್ತೋದ್ಧಾರ ಜಗಮಾನ್ಯ||

ಮಾನಗಂಗಾ ತಟದಲ್ಲಿ| ಗೋಂದಾವಳಿಯ ಪುರದಲ್ಲಿ|

ಗೀತಾಮಾತೆಯ ಗರ್ಭದಲಿ| ಜನಿಸಿದೆ ಗಣಪತಿ ನಾಮದಲಿ||

ಅಜ್ಞಾನಾದಿಗಳ್ ನೀಗಿಸುತ| ಸುಜ್ಞಾನವನೇ ಬೋಧಿಸುವ||

ನೇಮದಿ ನಾಮದ ತಾರಕವ| ಸಾರುತ ಜಗವನು ಪೊರೆಯುತಿಹ||

ಬ್ರಹ್ಮಾನಂದ ಪೂಜಿತನ| ಬ್ರಹ್ಮಸ್ವರೂಪಿ ಮಾರುತಿಯ||


ಈ ಭಜನೆಯನ್ನು ಕೇಳಲು ಕೆಳಗಿನ ಬಟನ್ ಅನ್ನು ಕ್ಲಿಕ್ಕಿಸಿ.



ರಚನೆ: ಶ್ರೀ ಬ್ರಹ್ಮಾನಂದ ಮಹರಾಜರು
ಹಾಡಿದವರು: ಶ್ರೀ ಅನಂತ ನಾರಾಯಣನ್ ಮತ್ತು ಸಂಗಡಿಗರು
ಸಂಯೋಜನೆ: ಶ್ರೀ ಬಿ.ವಿ.ಬಾಲಸಾಯಿ

ಈ ಭಜನೆ ಮತ್ತು ಇನ್ನೂ ೧೩ ಭಜನೆಗಳಿರುವ "ಚೈತನ್ಯ ಸ್ಮರಣಂ" ಸಿ.ಡಿ.ಯನ್ನು ಪಡೆಯಲು ಆಸಕ್ತ ಭಕ್ತರು
ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಮಂದಿರ, ಎನ್.ಆರ್.ಎಕ್ಸ್‌ಟೆನ್ಷನ್,
ಚಿಂತಾಮಣಿ, ಕರ್ನಾಟಕ 563125
ಅನ್ನು ಸಂಪರ್ಕಿಸಬಹುದು.


Wednesday, April 8, 2009

ಜಿ.ಜಯರಾಂ ರವರ ಕವನ


ಶ್ರೀ ರಾಮಶೇಷಯ್ಯ ನವರ ನೂರನೇ ಹುಟ್ಟುಹಬ್ಬದ ಅಂಗ ವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ರಾಮದಾಸೀ ಭಿಕ್ಷದ ನೆನೆಪಿಗಾಗಿ ಶ್ರೀಜಿ. ಜಯರಾಮ್ ರವರು ರಚಿಸಿದ ಒಂದು ಕವನ.
ರಾಮದಾಸೀ ಭಿಕ್ಷೆ.

ರಾಮದಾಸೀ ಭಿಕ್ಷೆ ಅಂತಿಂತ ಭಿಕ್ಷೆಯಲ್ಲಸ್ವತಃಪರಮಶಿವನು ಬೇಡಿದ ಭಿಕ್ಷೆರಾಮದಾಸರು ಅಂದು ಜೋಳಿಗೆ ಧರಿಸಿರಾಮನಾಮವ ಪಠಿಸಿ ಬೇಡಿದ ಭಿಕ್ಷೆ //೧//
ಪರಮ ಪಾವನ ಭಿಕ್ಷೆ ಪತಿತಪಾವನ ಭಿಕ್ಷೆಅನ್ನಪೂರ್ಣೆಯು ಸ್ವತಹ ಕರುಣಿಸಿದ ಭಿಕ್ಷೆಪಾಪವೆಲ್ಲವ ತೊಳೆವ ಪದುಮನಾಭನ ಭಿಕ್ಷೆಪಾಮರರಿಗೆ ಇದು ಸ್ವರ್ಗಸುಖದ ಭಿಕ್ಷೆ /೨/
ಬ್ರಹ್ಮಾನಂದ ಮಹಾರಾಜರು ಆಶೀರ್ವದಿಸಿದ ಜೋಳಿಗೆಪೂಜ್ಯ ವೆಂಕಣ್ಣಯ್ಯನವರ ಕೃಪೆಯಿಂಕೂಡಿದ ಜೋಳಿಗೆರಾಮಶೇಷಯ್ಯನವರ ಪಾಲಿಗಿದು ಅಕ್ಷ್ಯದ ಜೋಳಿಗೆಗುರುಶಿಷ್ಯ ಸಂಬಂಧಕೆ ನಾಂದಿಯಾದ ಜೋಳಿಗೆ /೩/
ಪ್ರತಿ ಗುರುವಾರದಂದು ನಗರ ಪ್ರದಕ್ಷಿಣೆ ಹಾಕಿಪೂಜ್ಯ ರಾಮಶೇಷಯ್ಯನವರು ಬೇಡಿದ ಭಿಕ್ಷೆನಗರವಾಸಿ ಜನಕೆ ಶ್ರೀರಾಮ ಭಿಕ್ಷೆಯ ನೀಡಿಸದ್ಭಕ್ತರನ್ನಾಗಿಸಿದ ಅಕ್ಷಯ ರಾಮದಾಸೀ ಭಿಕ್ಷೆ /೪/
ಹೆಗಲಲ್ಲಿ ಜೋಳಿಗೆ ಕೈಯಲ್ಲಿ ಝೇಂಕರಿಪ ತಾಳಕಾಲಲ್ಲಿ ಗೆಜ್ಜೆ ಘಲು ಘಲು ಎಂಬ ಚಂದ ನಿನಾದಹಣೆಯಲ್ಲಿ ಗಂಧ ತಿಲಕ ಮುಖದ ಕಾಂತಿಗೆ ಪ್ರೇರಕವದನದಲಿ ಸಿಹಿನಾಮ ರಘುಪತಿ ರಾಘವ ರಾಜಾರಾಮ /೫/
ಹಗಲಿಂದ ಸಂಜೆಯವರೆಗೆ ಬರಿ ಶ್ರೀ ರಾಮ ನಾಮಅದ ಬಿಟ್ಟು ಅನ್ಯ ಮಾತಿಲ್ಲ ಸಂಸಾರ ಝಂಜಾಟವಿಲ್ಲಬಿಸಿಲಿರಲಿ ಮಳೆಬರಲಿ ಬಿರುಗಾಳಿಯ ಅಬ್ಬರವಿರಲಿನಡೆಸಿದರು ರಾಮದಾಸಿ ಭಿಕ್ಷೆ ದಶಕಗಳವರೆಗೆ /೬/
ಮನೆಮನೆಯ ಭಕ್ತರು ದಾರಿಹೋಕರು ಎಲ್ಲಹಾಕುತ್ತಿದ್ದರು ಧನಧಾನ್ಯವನು ಜೋಳಿಗೆಯಲ್ಲಿಪಾದವನು ಮುಟ್ಟಿ ಭಕ್ತಿಲಿ ನಮಸ್ಕರಿಸುತಲಿಧನ್ಯರಾದೆವು ಎಂದು ಸದಾ ಬಾವಿಸುತಲಿ /೭/
ಈ ಮಹನೀಯರ ಜನ್ಮಶತಾಬ್ಧಿಯ ಸವಿ ನೆನಪಿಗಾಗಿಮಾಡುವೆವು ಇಂದು ನಾವುಗಳು ರಾಮದಾಸಿ ಭಿಕ್ಷೆಜಗವೆಲ್ಲ ರಾಮ ಮಯವಾಗಿ ಜನರೆಲ್ಲ ರಾಮನಂತಾಗಿಜಗದಿ ಬಾಳಲಿ ಎನುತ ಬೇಡುವನು ಚೈತನ್ಯ ದಾಸ /೮/

Wednesday, April 1, 2009

ವೈ.ಜಿ.ಗಿರಿಶಾಸ್ತ್ರಿ ರವರ ರಾಮದಾಸೀ ಭಿಕ್ಷೆ

ಶ್ರೀ ರಾಮ ಸಮರ್ಥ

ರಾಮದಾಸೀ ಭಿಕ್ಷೆ


ರಾಮ ದಾಸೀ ಭಿಕ್ಷೆ - ನಿರುಪಮ //ಪ//ನೇಮದಿ ಗೈದೊಡೆ ದಿಟವು ರಾಮರಕ್ಷೆ //ಅ.ಪ//
ಬನ್ನಿ ಭಕುತರೇ, ಚಿನ್ಮಯ ಮೂರ್ತಿಯ ನನ್ನಿಯಿಂದ ನಾವ್ ನುತಿಸಿ ಕೊಂಡಾಡುವ //೧//
ಪತಿತ ಪಾವನನ ದಶರಥ ತನಯನಸತತ ನೆನೆಯಲಿದು ಅನುಪಮ ಸಾಧನ //೨//
ಹೆಗಲಲಿ ಜೋಳಿಗೆ ಕರದಲಿ ತಾಳವುಭಗವಂತನ ಕೃಪೆ ಲಭಿಸುವ ಪರಿಕರ//೩//
ಪರಮ ಭಕ್ತಾಗ್ರಣಿ ರಾಮಶೇಷಾರ್ಯರು ಗುರುವಾರದ ದಿನ ನಡೆಸಿದ ಕಾಯಕ //೪//
ಪುಣ್ಯ ದೊರಕಿಸುವ ಪಾಪವ ಕಳೆಯುವ ಧನ್ಯತೆ ನೀಡುವ ನಿರ್ಮಲ ಸೇವೆಯ //೫//
ಬ್ರಹ್ಮಚೈತನ್ಯ ಸದ್ಗುರುವನು ಸ್ಮರಿಸುತ ಬ್ರಹ್ಮಾನಂದ ಪ್ರಸಾದ ಕರುಣಿಸುವ //೬// -----ವೈ.ಜಿ. ಗಿರಿಶಾಸ್ತ್ರಿ.

Tuesday, February 10, 2009

ಕೈವಾರದ ಶ್ರೀ ಯೋಗಿನಾರೇಯಣ ಯತಿಗಳ ಒಂದು ಭಜನೆ

ಕೈವಾರದ ಶ್ರೀ ಯೋಗಿ ನಾರೇಯಣ ಯತಿಗಳು ರಚಿಸಿದ ಒಂದು ಕನ್ನಡ ಭಜನೆ.

ಆತ್ಮ ಧ್ಯಾನಿಸೊ ಮನುಜಾ ಹರಿಪುಣ್ಯನಾಮ ಬಲವಂತವಾದ ಭವಹರ ಮಾಡೋ ನಾಮ //ಪ//
ಘೋರ ಪಾತಕ ಅಜಮಿಳನ ಸಲಹಿದ ನಾಮಾವಾಲ್ಮೀಕಿ ಮುನಿಗೆ ವರಕೊಟ್ಟನಾಮದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮದ್ರೌಪದಿಯ ಮಾನಭಂಗ ಕಾಯ್ದ ನಾಮಾ //ಆತ್ಮ//
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮಪ್ರಹ್ಲಾದನಿಗೆ ಪ್ರಸನ್ನವಾದ ನಾಮಾಅಜಸುರಾದಿಗಳು ಅನುದಿನವು ಜಪಿಸುವ ನಾಮಾಗಜವ ಪಾಲಿಸಿದ ಜಗದೀಶ್ವರ ನಾಮಾ // ಆತ್ಮ ಧ್ಯಾನಿಸೋ//
ಅಂತಕನ ದೂತರನ್ನು ಹೊಡೆದು ಓಡಿಸೋ ನಾಮಾಆಂಜನೇಯನಿಗೆ ಆಧಾರ ನಾಮಾಅವಸಾನ ಕಾಲಕ್ಕೆ ಹಾದಿತೋರುವ ನಾಮಾನಂಬಿರೋ ಅಮರನಾರೇಯಣಸ್ವಾಮಿ ನಾಮಾ // ಆತ್ಮ//

Monday, December 22, 2008

ವೈ.ಜಿ. ಗಿರಿಶಾಸ್ತ್ರಿಯವರ ' ಮೊರೆ'


ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ 95 ನೆಯ ಆರಾಧನಾ ಮಹೋತ್ಸವದ ಸವಿನೆನಪಿಗಾಗಿಶ್ರೀ ವೈ.ಜಿ. ಗಿರಿಶಾಸ್ತ್ರಿಯವರು ರಚಿಸಿದ ಗೀತೆ.
ಶ್ರೀರಸ್ತು

ಮೊರೆ
ಎಷ್ಟು ದಿನ ಈ ತೆರದಿ ಮೌನದಿಂದಿರುವೆ //ಪ//ಕಷ್ಟಗಳ ನಾ ಸಹಿಸೆ ದಯತೋರು ಗುರುವೇ //ಅ//
ಬಿಳಿಯ ಶಿಲೆಯಲಿ ಕುಳಿತು ಏಕಿಂತು ಪರಿಕಿಸುವೆ? ಬಳಲುತಿರುವೆನು ಸ್ವಾಮಿ ಈ ಭವದ
ಬೇಗೆಯಲಿಸುಲಭ ನೀನೆನ್ನುವರು ಎನಗೇಕೆ ದುರ್ಲಭನು?
ಒಲವ ಧಾರೆಯನೆರೆದು ಸಲಹೆನ್ನ ಸದ್ಗುರುವೇ //
ಕರುಣಾಳು ಗುರುದೇವ ಕರೆದೊಡನೆ ಕನಿಕರಿಸು//
ಕರಪಿಡಿದು ಕಾಪಾಡು ನಿನ್ನಲ್ಲಿ ಮೊರೆಯಿಡುವೆ//
ತೊರೆಯದಿರು ಕಂದನನು ಕಡೆಗಣಿಸದಿರು ತಂದೆ//
ಚರಣಗಳ ಹಿಡಿದಿರುವೆ ಸಂತೈಸು ಸಂತಸದಿ//
ನೀನೆನಗೆ ಅಧಿದೈವ ನೀನಗೆ ಸರ್ವಸ್ವನೀನೆನ್ನ ಬಾಳ ಪಯಣಕೆ ದಿವ್ಯ ಬೆಳಕು//
ನೀನು ಪಾವನಚರಿತ ಎನ್ನ ಹರಸೈ ಪ್ರಭುವೇ
ಭಾನು ತೇಜೋಮೂರ್ತಿ ಶ್ರೀ ಬ್ರಹ್ಮಚೈತನ್ಯ//
- ವೈ. ಜಿ. ಗಿರಿಶಾಸ್ತ್ರಿ.

Saturday, November 22, 2008

ಮಹಾ ಮಂಗಳಾರತಿ

ಮಹಾ ಮಂಗಳಾರತಿ
ಜಯ ದೇವ ಜಯ ದೇವ ಜಯ ಜಯ ಸಮರ್ಥಾ/ ಶ್ರೀ ಬ್ರಹ್ಮಚೈತನ್ಯ ಸದ್ಗುರುನಾಥಾ ಜಯ ದೇವ//ತೂ ಅನಿರ್ವಚನೀಯ ಪರಮಾತ್ಮ ಅಸಸೀ / ಲೋಕೋಧ್ಧಾರ ಸಾಠೀ ನರತನುಧರಲೀಸೀ//ಮಾಣಗಂಗಾತೀರೀ ಪ್ರಗಟ ಝಾಲಾಸೀ / ಗೋಂದಾವಲೇಗ್ರಾಮೀ ಕುಲಕರ್ಣಿವಂಶೀ// //ಜಯ ದೇವಾ

ಶರಣಾಗತಾಸೀ ತ್ವಾ ನಿಜಸುಖದಿದಲೇ /ದೀನಾಲಾಗೀ ಕೃತ್ಯ ಅಧ್ಭುತಕೇಲೇ //ಜಾಗೋ ಜಾಗೀ ರಾಮಮಂದಿರ ಸ್ಥಾಪಿಯಲೇ /ಭೂಮಂಡಳೀ ರಾಮನಾಮ ಗರ್ಜವಿಲೇ// ೨// //ಜಯ ದೇವಾ

ತೂ ಸಚ್ಚಿದಾನಂದ ತೂ ಸ್ವಯಂಜ್ಯೋತಿ / ಭಾವೇ ಓವಾಳಿತೋ ಕರ್ಪೂರಾರತಿ //ಮಹಾಭಾಗವತಾಚೀ ತವ ಪಾಯಿ ಪ್ರೀತಿ / ಘ್ಯಾವೀ ಸೇವಾ ಸದಾ ಹೇ ಚಾ ವಿನಂತಿ // ೩// // ಜಯ ದೇವಾ

Tuesday, November 11, 2008

ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರವರ ಅಷ್ಟೋತ್ತರ

ಬ್ರಹ್ಮಚೈತನ್ಯ ತವಶರಣಂ/ಬ್ರಹ್ಮಾನಂದ ತವಶರಣಂ //ಸದ್ಗುರುಮೋರ್ತೇ ತವಶರಣಂ/ಶ್ರೀ ಗುರುಮೂರ್ತೆ ತವಶರಣಂ//

ಗೊಂದಾವಲೇಕರ ತವಶರಣಂ/ಗೋಧನರಕ್ಷಕ ತವಶರಣಂ//ಭಕ್ತವತ್ಸಲ ತವಶರಣಂ/ಭಕ್ತೊಧ್ಧಾರಕ ತವಶರಣಂ//

ಯೋಗಾನಂದ ತವಶರಣಂ /ಯೋಗಿ ನಿರಂಜನ ತವಶರಣಂ//ರಾಮದಾಸ ತವಶರಣಂ /ರಾಮರೂಪಿ ತವಶರಣಂ//

ಕ್ರುಪಾಮೂರ್ತೆ ತವಶರಣಂ/ಕ್ರುಪಾನಿಧೆ ತವಶರಣಂ//ಶಾಂತಮೂರ್ತೆ ತವಶರಣಂ/ಶಾಂತಸಾಗರ ತವಶರಣಂ//

ಮಾರುತಿರೂಪ ತವಶರಣಂ /ಮಾರಾಕಾರ ತವಶರಣಂ //ಗೀತಾಪುತ್ರನೆ ತವಶರಣಂ/ಗೀತಾಬೋಧಕ ತವಶರಣಂ//

ದುರ್ಜನ ಶಿಕ್ಷಕ ತವಶರಣಂ/ ಸಜ್ಜನರಕ್ಷಕ ತವಶರಣಂ//ಕರುಣಾಮೂರ್ತೇ ತವಶರಣಂ/ ಕಾರುಣಮೂರ್ತೇ ತವಶರಣಂ//

ರಾವುಜಿಪುತ್ರನೆ ತವಶರಣಂ/ ಶ್ರೀವಲ್ಲಭ್ಹಪ್ರಿಯ ತವಶರಣಂ//ಜ್ನಾನಾನಂದ ತವಶರಣಂ/ಜ್ನಾನಪ್ರಕಾಶಕ ತವಶರಣಂ//

ವೇದಾಂತವೇದ್ಯ ತವಶರಣಂ/ ವೇದೋದ್ಧಾರಕ ತವಶರಣಂ//ಗಣಪತಿ ನಾಮಕ ತವಶರಣಂ/ ಗಣ್ಯಶ್ರೇಷ್ಠನೆ ತವಶರಣಂ//

ತ್ರಿಗುಣಾತೀತನೆ ತವಶರಣಂ/ ಸಗುಣನಿರ್ಗುಣ ತವಶರಣಂ//ರಾಮನಾಮಪ್ರಿಯ ತವಶರಣಂ/ಕಾಮಿತದಾಯಕ ತವಶರಣಂ//

ವೇಣೀಭಂದನ ತವಶರಣಂ/ ಪುಣ್ಯಪುರುಷನೆ ತವಶರಣಂ//ಸುಂದರಮೂರ್ತೆ ತವಶರಣಂ/ ಬಂಧ ವಿಮೋಚಕ ತವಶರಣಂ//

ಭವಭಯವರ್ಜಿತ ತವಶರಣಂ/ಭವಭಯನಾಶಕ ತವಶರಣಂ//ಕರಣಿಕವಂಶಜ ತವಶರಣಂ/ಗುರುದರ್ಶನಪ್ರಿಯ ತವಶರಣಂ//

ಲೋಕಪೂಜಿತ ತವಶರಣಂ/ಲೋಕೋದ್ಧಾರಕ ತವಶರಣಂ//ತುಕಾರಾಮಪ್ರಿಯ ತವಶರಣಂ/ನಿಷ್ಕಾಮಪ್ರಿಯ ತವಶರಣಂ//

ಮೋಕ್ಷದಾಯಕ ತವಶರಣಂ/ಮೋಕ್ಷಪ್ರೇಕ್ಷಕ ತವಶರಣಂ//ಭಾಗೀರಥೀಪತಿ ತವಶರಣಂ/ಭಾಗವತಾಶ್ರಯ ತವಶರಣಂ//

ಚಿನ್ಮಯಾತ್ಮಕ ತವಶರಣಂ/ಚಿನ್ಮಯರೂಪನೆ ತವಶರಣಂ//ಭೀತಿನಾಶಕ ತವಶರಣಂ/ಜ್ಯೋತಿಸ್ವರೂಪನೆ ತವಶರಣಂ//ಕಾಶೀವಾಸಾ ತವಶರಣಂ/ಕ್ಲೇಶನಾಶಕ ತವಶರಣಂ//

ಮಾಯಾರೂಪನೆ ತವಶರಣಂ/ಮಾಯಾರಹಿತನೆ ತವಶರಣಂ//ಸತ್ಯಸ್ವರೂಪನೆ ತವಶರಣಂ/ನಿತ್ಯಭೋಧಕ ತವಶರಣಂ//

ನಾಗಪಾಶಛೇದಕ ತವಶರಣಂ/ಯೋಗಶಕ್ತಿಯುತ ತವಶರಣಂ//ಅಭಿಮಾನವರ್ಜಿತ ತವಶರಣಂ/ತ್ರಿಭುವನಪಾಲಕ ತವಶರಣಂ//

ಪ್ರೇತೋಜ್ಜೀವಕ ತವಶರಣಂ/ನಿತ್ಯಯೋಗಿನುತ ತವಶರಣಂ//ಕರ್ಮಭೋಧಕ ತವಶರಣಂ/ನಿರ್ಮಲಜ್ನಾನಿ ತವಶರಣಂ//

ಬ್ರಹ್ಮಾನಂದಪ್ರಿಯ ತವಶರಣಂ/ಬ್ರಹ್ಮರೂಪನೆ ತವಶರಣಂ//ಪರಮೋದ್ಧಾರ ತವಶರಣಂ/ಪರಮಾತ್ಮಸ್ವರೂಪನೆ ತವಶರಣಂ//

ಯೋಗದಂಡಭೂಷಿತ ತವಶರಣಂ/ಯೋಗನಿಲಯನೆ ತವಶರಣಂ//ಅನ್ನವೃದ್ಧಿಕರ ತವಶರಣಂ/ಅನಾಥನಾಥ ತವಶರಣಂ//

ಭದ್ರಾಧೀಶನೇ ತವಶರಣಂ/ಕ್ಷೇತ್ರಕಾರಕ ತವಶರಣಂ//ಶಾಂತಾಪಿತನೆ ತವಶರಣಂ/ಭ್ರಾಂತಿನಾಶಕ ತವಶರಣಂ//

ಧರ್ಮೋಧ್ಧಾರಕ ತವಶರಣಂ/ಸನ್ಮಾರ್ಗಬೋಧಕ ತವಶರಣಂ//ಕ್ಷೀರವೃಧ್ಧಿಕರ ತವಶರಣಂ/ ಕ್ಷಾರಮಧುರಕರ ತವಶರಣಂ//

ಸುರವರಸನ್ನುತ ತವಶರಣಂ/ ಭಾನುವರಪ್ರದ ತವಶರಣಂ//ನೀಲಕಂಠ ರಕ್ಷಕ ತವಶರಣಂ/ ಮಾಲಾಶೋಭಿತ ತವಶರಣಂ//

ಮನ್ಮಥರೂಪನೆ ತವಶರಣಂ/ ಮನ್ಮಥ ಹಿತನುತ ತವಶರಣಂ//ಅಶ್ವರಕ್ಷಕ ತವಶರಣಂ/ ವಿಶ್ವವ್ಯಾಪಕ ತವಶರಣಂ//

ಮಹಾರೋಗಹರ ತವಶರಣಂ/ಮಹಾಮಹಿಮನೆ ತವಶರಣಂ//ಮಾತೃವಾಕ್ಯ ಪಾಲಕ ತವಶರಣಂ/ಮಾತೃಸೇವಕ ತವಶರಣಂ//

ಮಂಗಳಾತ್ಮಕ ತವಶರಣಂ/ಮಂಗಳರೂಪನೆ ತವಶರಣಂ//ಜಯಜಯಗುರುವರ ತವಶರಣಂ/ ಜಯಜಯಸದ್ಗುರು ತವಶರಣಂ//

ಬ್ರಹ್ಮಚೈತನ್ಯ ತವಶರಣಂ/ ಬ್ರಹ್ಮಾನಂದ ತವಶರಣಂ//ಅನಂತಕೋಟಿ ಬ್ರಹ್ಮಾಂಡನಾಯಕ/ ರಾಜಾಧಿರಾಜ ತವಶರಣಂ//

Wednesday, September 24, 2008

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿಕೊಟ್ಟ ಒಂದು ಭಜನೆ.

ರಾಮ ರಾಮ ರಾಮ ಸೀತಾ ರಾಮ ರಾಮ ಅನ್ನಿರಿ, ರಾಮಸ್ಮರಣೆಯ ಹೊರ್ತುಕಾಲ ವ್ಯರ್ಥ ಕಳೆಯಬೇಡಿರಿ.
ಸ್ನಾನಸಂಧ್ಯಾ ನಿತ್ಯನೇಮ ಜಪವತಪವನು ಮಾಡಿರಿ, ಸಾಯೋಸಂಕಟ ಬಂದರೂ ಪರಧರ್ಮ ಹಿಡಿಯಬೇಡಿರಿ.
ತಂದೆ ತಾಯಿ ಬಂಧು ಬಳಗವು ಮಿಥ್ಯವೆಂದು ತಿಳಿಯಿರಿ, ನಂದು ನಾನೆಂದೆಂಬ ಮೋಹವ ಬಿಟ್ಟು ರಾಮನ ಭಜಿಸಿರಿ.
ಕಾಮ ಕ್ರೋಧ ಮೋಹ ಬಿಟ್ಟು ಮನಸು ಜಳಜಳಮಾದಿರಿ, ಕಾಯವಾಚ ಮನಸಿನಿಂದ ಗುರುವಿಗೆ ಶರಣ್ಹೋಗಿರಿ.
ಪರರನಾರಿ ಪರರದ್ರವ್ಯ ನರಕವೆಂದು ತಿಳಿಯಿರಿ, ಚಿಂತೆಯಿಲ್ಲದೆ ರಾಮಚಿಂತಿಸಿ ಜನನ ಮರಣವ ನೀಗಿರಿ.
ಭಕ್ತಿಭಾವದಿಂದ ಸದ್ಗುರು ಹರಿಯು ಹರನೆನ್ದರಿಯಿರಿ, ಗುರುವಿನಪ್ಪಣೆಯಂತೆ ನಡೆದರೆ ಮುಕ್ತಿಯೆಂದು ತಿಳಿಯಿರಿ.
ದಿವಸರಾತ್ರೆ ಸಾಧುಸಂತರ ಸಂಘವನ್ನೇ ಬಯಸಿರಿ, ಬ್ರಹ್ಮಾನಂದರು ಸಾರಿಹೇಳುವ ರಾಮನಾಮವ ಜಪಿಸಿರಿ.
.

Wednesday, April 30, 2008

kannada bhajans

ಕೆಲವು ಭಜನೆಗಳು

೧) ಮಹಾರಾಜ್ ನಿನ್ನನು|ಬೇಡುತಿಹೆ ನಾನು||
ಮಹನೀಯ ಎನ್ನನು|ಕೈ ಬಿಡಬೇಡೆಂದು|ಕೃಪೆ ಮಾಡಬೇಕೆಂದು|| ||ಪ||

ನಾಮದ ಮಣಿಯ ಬೆಳಕಿನಿಂದ|ದಾರಿಯನ್ನೇ ತೋರಿದೆ|


ನಾಮಸ್ಮರಣೆ ಮಾತ್ರದಿಂದ |ಭಕ್ತರ್ನೆಲ್ಲಾ ಕಾಯ್ದೆ|ಕಷ್ಟವೆಲ್ಲ ನೀಗಿಸಿದೆ||

ಜೀಜಾಬಾಯಿಯ ಕೈಯಿಂದ ನೀ|ಕೆಂಡವನ್ನೇ ನುಂಗಿದೆ|
ಮಾಝೇ ಸದ್ಗುರು ರಾವೋ|ಎಂದು ಪಾಡಿಸಿಕೊಂಡೆ|ಎಂದು ಪೊಗಳಿಸಿಕೊಂಡೆ||

ಚಿಂತಾಮಣಿಯ ಮಂದಿರದಲ್ಲಿ|ಸದಾ ವಾಸಿಪೆನೆಂದೆ|
ಚಿಂತೆಯೆಲ್ಲ ವನ್ನೆ ಹರಿಸಿ|ನಾಮಸ್ಮರಣೆ ಮಾಡೆಂದೇ|ರಾಮಸ್ಮರಣೆ ಮಾಡೆಂದೇ||
ಸ್ವಾಮಿ ಬ್ರಹ್ಮಚೈತನ್ಯ|ಪ್ರೇಮದಿಂದ ನೋಡೆನ್ನ|
ಸಾಮಿದಾಸ ಬೇಡುವ| ಭಕ್ತಿಯನ್ನು ನೀಡೆಂದು| ಮುಕ್ತಿಯನ್ನು ನೀಡೆಂದು||

೨)
ನಮೋ ದೇವಾ ಸದ್ಗುರುನಾಥ| ನೀನು ಪ್ರತ್ಯಕ್ಷ ರಘುನಾಥ||
ಪತಿತಪಾವನನು ನೀನು| ಮಹಾ ಪತಿತನು ನಾನು||
ದೀನ ಬಂಧುವು ನೀನು| ಬಹು ದೀನನು ನಾನು||
ನೀನು ಶರಣಾಗತ ವತ್ಸಲ| ನಾನು ಶರಣು ಬಂದೆನಲ್ಲಾ||
ಹಾಕಿಕೊಳ್ಳೊ ಪದರಿನೊಳಗೆ| ಅನನ್ಯ ಭಕ್ತಿ ಹಚ್ಚೋ ಎನಗೆ||
ಮಾಡೋ ಭಗವಂತ ನನ್ನ| ಮಹಾಭಾಗವತನನ್ನ||

೩)
ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ||
ನಿತ್ಯ ನಿರಂಜನ|ಸತ್ಯ ಸ್ವರೂಪ| ಭಕ್ತೋದ್ಧಾರ ಜಗಮಾನ್ಯ||
ಮಾನಗಂಗಾ ತಟದಲ್ಲಿ| ಗೋಂದಾವಳಿಯ ಪುರದಲ್ಲಿ|
ಗೀತಾಮಾತೆಯ ಗರ್ಭದಲಿ| ಜನಿಸಿದೆ ಗಣಪತಿ ನಾಮದಲಿ||
ಅಜ್ನಾನಾದಿಗಳ್ ನೀಗಿಸುತ| ಸುಜ್ನಾನವನೇ ಬೋಧಿಸುವ||
ನೇಮದಿ ನಾಮದ ತಾರಕವ| ಸಾರುತ ಜಗವನು ಪೊರೆಯುತಿಹ||
ಬ್ರಹ್ಮಾನಂದ ಪೂಜಿತನ| ಬ್ರಹ್ಮಸ್ವರೂಪಿ ಮಾರುತಿಯ||
ಭವಸಾಗರವ ದಾಟಿಸುವ| ಅಭಯವ ನೀಡಿ ಪೊರೆಯುತಿಹ||