Saturday, June 4, 2011

Sri Sadguru Maharaj's Instructions (also in Kannada)

INSTRUCTIONS of  Shri Brahma Chaithanya Maharaj



This Instructions ( instructions given to a Disciple to communicate to Brother-Disciples) has an earlier history.
Sri G.Venkannaiah had this english version with him. In early 1950's, when he was sitting in the office of the Mandir, he had some visitors. Among them was one Ashthavadhani. He had a tremendous memory power and good in literature. Sri G.Venkannaiah gave this 'Instructions ' to him to translate in to Kannada. He immediately wrote this in poetic form in Kannada, which is sung occasionally in the Chintamani Mandir.Of course, many devotees chant this daily at their homes, which give immense moral strength to the devotee.
The Kannada Version is given here below.


ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರವರ ನಿರೂಪ

ಮೊದಲು ನಾ ನಿನಗೊರೆದ ರೀತಿಯ ಸದಮಲಾಚರಣೆಯನು
ಸಮ್ಮುದದೊಳಾಚರಿಸಿ ನ್ನೊರೆವೆ ನಿಜಪಾರಮಾರ್ಥವನು||
ಪದುಮನಾಭನು ಕರುಣೆಯಿಂದಿತ್ತುದನೆ ತೃಪ್ತಿಯೊಳನುಭವಿಸುತಿರು
ವದುವೆ ನಿಜಪಾರಮಾರ್ಥತತ್ವವು ತಿಳಿಯಲೈನಿಜದಿ ||೧||

ಹಿತವೊ ಅಹಿತವೊ ನೀನಿರುವ ಸ್ಥಿತಿಮತಿಯುತನೆ ಲೆಕ್ಕಿಸಲು ಬೇಡದ
ಪತಿತ ಪಾವನ ಶ್ರೀ ರಮಾಧವನಿತ್ತುದೆಂದರಿಯೈ ||
ಕ್ಷಿತಿಯೊಳೊಂದೂ ನಡೆಯದಾ ಶ್ರೀ ಪತಿಯ ಚಿತ್ತಕೆ ಬಾರದಿರೆ ನೀ
ಹಿತದಿ ತಿಳಿದಿದನಡೆಯೆ ಚಿಂತೆಯು ಬಾಧೆಪಡಿಸದೆಲೈ ||೨||

ಚಿಂತೆಗೊಪ್ಪಿಸೆ ಮನವ ನೀನಾ ಕಂತುಪಿತನೌಪಾಸನೆಯ ನಿ
ಶ್ಚಿಂತೆಯಲಿ ಮುಂದರಿಯದೈ ಮನವಿರಿಸು ಚಲಿಸದೊಲು ||
ಇಂತು ನೀ ಶ್ರೀ ಹರಿಯ ನಂಬಲು ಸಂತಸದಿ ನಿನಗಾತನೆರವಹ
ನಿಂತು ನೀ ನೆಸಗುವುದಿದೆಲ್ಲವು ಶ್ರೀಶನಾಣತಿಯೈ ||೩||

ನಿನ್ನ ನೀ ನೆರೆನಂಬಿ ಮಾಡುವದನ್ನು ಮಾಡೆಲ್ಲವನು ಪ್ರೇಮವ
ಮುನ್ನ ನೀನಾತನೊಳೆ ನೆಲೆಸುತ ಚಲಿಸದಂದದಲಿ ||
ಸನ್ನುತಾಂಗನ ನಾಮಸ್ಮರಣೆಯ ದಿನ್ನು ಶ್ರೀಹರಿಯನ್ನು ನೆನೆದಂ
ತೆನ್ನುವುದ ನೀ ಮರಯಬೇಡೆಲೊ ನೈಜವಿದು ನೆನೆಯೆಯೈ

ಹರಿಯ ನೆನೆವುದರೊಳಗೆ ತೋರುವ ವರಮಹಿಮೆಯೇ ನಾಮಸ್ಮರಣೆಯೊ
ರುವುದಹಹ, ನಾಮಸ್ಮರಣೆಯೆ ಸತ್ವದಾಗರವೈ ||
ಇರಿಸಿನಿಜನಂಬಿಕೆಯನಿದರೊಳು ತೊರೆಯೊ ವಿವಿಧವಿಚಾರವೆಲ್ಲವ
ಬಾರಿಬಾರಿಗು ಪೇಳ್ವೆ ಸ್ದಂಶಯವಿಲ್ಲವಿದಕಿನ್ನು ||೫||

ಎಲ್ಲಿಯಾತನ ನಾಮಸ್ಮರಣೆಯೊ ಅಲ್ಲಿ ಶ್ರೀಶನು ನಿಂತುಕೊಂಡಿಹ
ನಿಲ್ಲಿರುವನಲ್ಲಿಲ್ಲವೆನ್ನುವ ಸೊಲ್ಲುಸಲ್ಲದೆಲೈ ||
ಫುಲ್ಲನಾಭನ ನಾಮ ನೆನೆವುದರಲ್ಲಿ ನಿಜನಂಬಿಕೆಯನಿರಿಸಲು
ಬಲ್ಲಿದನ ಜೊತೆಯೊಳಗೆ ನೀನಿರ್ದಂತೆಯಾಗುವುದೈ ||೬||

ನೆನೆದ ಸಮಯದಿ ಮಾತ್ರ ನಾನಿಹೆ ನೆನೆಯದಿರೆ ನಾನಿಲ್ಲವೆನದಿರು
ದಿನರಜನಿಯೊಳಗೆಡಬಿಡದೆ ನಿನ್ನೊಡನೆ ನಾನಿಹೆನೈ ||
ನಿನಗೆ ದುರಿತಗಳೊದಗಿದಾಕ್ಷಣ ನೆನೆಯೆ ನನ್ನನು ನಿನ್ನ ದುರಿತವು
ತನಗೆ ತಾನೇ ತೊಲಗುವುದು ಬಳಲಿಸದೆ ನಿನ್ನನೆಲೈ ||೭

ಇರಿಸಿ ಧೃಢನಂಬಿಕೆಯ ಶ್ರೀಶನ ಚರಣ ಕಮಲ ದೊಳಾವಕಾಲಕು
ಸ್ಮರಿಸುತಾತನು ನಿನ್ನನಿರಿಸಿದ ಸ್ಥಳದಿ ಸುಖದೊಳಿರೈ ||

ತರಳ ನೀನವನಿಂಥ ಸ್ಥಳದೊಳಗಿರುವನೆಂದೆನಬೇಡ ಶ್ರೀಪತಿ
ಯಿರದ ಸ್ಥಳವೇ ಮೂರು ಲೋಕದೊಳಿಲ್ಲ ನಿಜಮಿದೆಲೈ ||೮||

ಮರಳುತನದಲಿ ಧರೆಯ ಭೋಗಕೆ ಬೆರಗುಗೊಳದಿರು ಗಾಳಿಗಂಟಿದು
ತರುವುದಿದು ಪರಮಾರ್ಥ ಸಾಧಿಸೆ ವಿಘ್ಹ್ನತತಿಯನ್ನು ||
ಒರೆವೆ ನಾನಿನ್ನೊಮ್ಮೆ ಹರಿಯನು ನಿರುತ ನಂಬಿರುವುದಕೆ ಬಾರದು
ಸರಿಯು ಸುಖದಿಂದಿರೆಲೊ ಹರಿತಾ ನಿನ್ನ ನಿರಿಸಿದೊಲು
ಆವ ಚಿಂತೆಗು ಮನವ ಕೊಡದಿರು ಭಾವಿಸದು ನನ್ನಾಜ್ನೆ ಎನ್ನುತ
ಆವುದೂನನ್ನಾಜ್ನೆಯಿಲ್ಲದೆ ನಡೆಯಲರಿಯದೆಲೈ ||
ಆವ ನಡೆವಳಿಕೆಯನು ಸ್ವಪ್ನದೊಳೊವಿದೆನೋ ನೀನದನು 
ನೆರೆಸಂಭಾವಿಸದು ಮಹಾರಾಜನೆನಿಸುವ ನನ್ನದೆಂದೆನುತ ||೧೦||

ಹರಿಯ ನಾಮದೊಳಿಹುದು ಮಹಿಮೆಯು ಸರುವುವೂ ನಾಮದೊಳೆ ಮೆರೆವುದು
ಬರಿದೆ ಯೋಚಿಸಲೇಕೆ ನಿಜನಂಬಿಕೆಯನಿರಿಸಿದರೋಳ್ ||
ಹರಿಯ ನಾಮದೊಳೆಲ್ಲ ಸತ್ವವು ಭರಿತವಾಗಿಹುದೆಂಬುದನು ನಾ
ತಿರುತಿರುಗಿ ಪೇಳುವೆನು ಶಪಥವ ಮಾಡಿ ಶ್ರೀಶನಲಿ ||೧೧||

ಮಾಡು ಯತ್ನವ ತೃಪ್ತಿಯನು ಮೈ ಗೂಡಿಸುವುದಕೆ ಎಡೆಬಿಡದೆ ನೀ
ಕಾಡಿಸದೆ ಬಾಧೆಗಳು ನಿನ್ನನು ತೃಪ್ತ ಮಾಡುವದೈ ||
ದೂಡು ಮನದನುಮಾನವೆಲ್ಲವ ನೋಡು ನಿಜಗುರುಪುತ್ರ ನಾಗೆಲೊ
ಮಾಡು ಕಾರ್ಯವ ಗುರುವು ನಿನಗೊರೆದಂತೆ ಸಂತಸದಿ ||೧೨||

ತೋರಿ ನೆಪವನು ಗುರುವಿನಾಜ್ನೆಯ ಮೀರಿ ನಡೆಯುವುದುಚಿತವಲ್ಲವು 
ಸಾರಿ ಪೇಳುವೆ ನೀನು ನನ್ನವನೆಂಬ ನಂಬಿಕೆಯು
ತೋರುತಲೆ ನನಗೊಮ್ಮೆ ಮುಂದಕೆ ಧೀರ ನಿನ್ನಯ ಕಾರ್ಯವೆಲ್ಲವು
ಸೇರುವುವು ನನ್ನನ್ನೇ ನೀ ಚಿರಂಜೀವಿಯಾಗಿರೆಲೈ ||೧೩||
___  ______ ________
ಮುರಳಿಯೊಳು ಸುಸ್ವರವು ಜನಿಸುವ ತೆರದೊಳೀ ಕೃತಿ ಪೂರ್ಣಮಾದುದು 
ಗುರುವೆ ನಿನ್ನಯ ಚರಣ ಯುಗಳದನುಗ್ರಹದೊಳಿಂದು ||
ಮುರಳಿ ಬಿದುರಿನದಾದರೂ ಸುಸ್ವರವು ಹೃದಯಾನಂದವಿರುವೊಲು
ನರರು ಸ್ವಾದವಗ್ರಹಿಸಿ ಕುಹಕವ ತೊರೆಯೆ ಬಾಗುವೆನು ||೧೪||

ಶ್ಯಾಮ ಸದ್ಗುಣಧಾಮವಪುಜಿತ ಕಾಮ ರಿಪುಕುಲಭೀಮ 
ಮೌನಿಸ್ತೋಮದುರಿತವಿರಾಮ ಮಂಗಲಪ್ರೇಮ ನಿಸ್ಸೀಮ ||
ಕಾಮಿತಾರ್ಥವನೀವ ಜಗದಭಿರಾಮ ಅಘನಿರ್ನಾಮ ಪಾವನ
ನಾಮ ರಕ್ಷಿಸು ಕಾಮಿತಾರ್ಥವನಿತ್ತು ಜನತತಿಯ ||೧೫||