Friday, June 16, 2023
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ
ಶಾಂತರೂಪಯನ್ನಂತರಂಗದಿ ಸಂತತ ವಾಸಿಸುವೀ| ಗುರುವರ ಸಂತತ ವಾಸಿಸುವೀ|
ಸಂತ ಮಕುಟಮಣೀ ಶಾಂತಿಸಾಗರಾ ಭ್ರಾಂತಿಯ ಛೇದಿಸುವೀ |
ಯೋಗಿವರ್ಯ ಶ್ರೀ ಬ್ರಹ್ಮಚೈತನ್ಯರ ಚರಣವ ಪೂಜಿಸಿದೀ| ಗುರುವರ ಚರಣವ ಪೂಜಿಸಿದೀ
ಯೋಗದಂಡ ಸತ್ತುಲಸೀಮಾಲೆಯ ಕೊರಳೊಳು ಧರಿಸಿದೆನೀ |
ವೇಣುನಗರದಿ ರಾಮನಾಮದ ಯಜ್ಞವಮಾಡಿಸಿದೀ | ಗುರುವರ ಯಜ್ಞವ ಮಾಡಿಸಿದೀ || ಗುರುವರ ಯಜ್ಞವ ಮಾಡಿಸಿದೀ| ಉಣೇ ಇಲ್ಲದೇ ಮಂಟಪದಿಂದಲಿ ಅಸುರನ ದೂಡೀದಿ|
ಬಾಧೆಯಿಂದ ಬಳಲುವ ವೆಂಕಟನ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ|
ಮೋದವಿತ್ತು ಸತ್ಪುತ್ರಗೆ ನಿತ್ಯಾನಂದವ ಪೊಂದಿಸಿದೀ ||
ಮಂದಹಾಸದಿ ಸದ್ಗುರುವರ್ಯರ ಪದದ್ವಂದ್ವ ನಂಬಿದೆನು | ಗುರುವರ ಪದದ್ವಂದ್ವವ ನಂಬಿದೆನು|
ಇಂದು ಸಚ್ಚಿದಾನಂದ ಸಮರ್ಥ ಬೆಳಗುವೆನಾರತಿಯಾ| ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ
ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ
ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ
ನಿತ್ಯಶುದ್ಧ ನಿಜಾನಂದ ನಿರುಪಮವೈಭವ |
ನೀರಂಜನ ನಿಷ್ಪ್ರಪಂಚ ನಿಜಜನ ಭವದಾವಾ
ನಿರೀಹ ನಿರ್ಮಲ ಮುನಿಗಣ ನುತಪದ ಕಾಯೋ ರಾಘವ ||
ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ
ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ
ವಾರಣಾಸೀ ಕ್ಷೇತ್ರದಿ ಪ್ರೇತವ ಬದುಕಿಸಿದಾತನೇ|
ಇದ್ದಲ್ಲಿದ್ದು ದೂರಿನ ಭಕ್ತಗೆ ದರ್ಶನಕೊಟ್ಟವನೇ
ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ |
ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ
ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ
ಸುಂದರಾನನಾ ಕುಂದರದನ ಇಂದೀವರನಯನ|
ಮಂದಸ್ಮಿತ ಹೃನ್ಮಂದಿರ ಸ್ಥಾಪಿತ ಇಂದಿರಾರಮಣ |
ಗಂಧವಾಹಪ್ರಿಯ ಪಾಹಿ ಪಾಹಿ ಬ್ರಹ್ಮಾನಂದನ್ನ ||
ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ
ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ
Subscribe to:
Posts (Atom)