Wednesday, April 30, 2008

kannada bhajans

ಕೆಲವು ಭಜನೆಗಳು

೧) ಮಹಾರಾಜ್ ನಿನ್ನನು|ಬೇಡುತಿಹೆ ನಾನು||
ಮಹನೀಯ ಎನ್ನನು|ಕೈ ಬಿಡಬೇಡೆಂದು|ಕೃಪೆ ಮಾಡಬೇಕೆಂದು|| ||ಪ||

ನಾಮದ ಮಣಿಯ ಬೆಳಕಿನಿಂದ|ದಾರಿಯನ್ನೇ ತೋರಿದೆ|


ನಾಮಸ್ಮರಣೆ ಮಾತ್ರದಿಂದ |ಭಕ್ತರ್ನೆಲ್ಲಾ ಕಾಯ್ದೆ|ಕಷ್ಟವೆಲ್ಲ ನೀಗಿಸಿದೆ||

ಜೀಜಾಬಾಯಿಯ ಕೈಯಿಂದ ನೀ|ಕೆಂಡವನ್ನೇ ನುಂಗಿದೆ|
ಮಾಝೇ ಸದ್ಗುರು ರಾವೋ|ಎಂದು ಪಾಡಿಸಿಕೊಂಡೆ|ಎಂದು ಪೊಗಳಿಸಿಕೊಂಡೆ||

ಚಿಂತಾಮಣಿಯ ಮಂದಿರದಲ್ಲಿ|ಸದಾ ವಾಸಿಪೆನೆಂದೆ|
ಚಿಂತೆಯೆಲ್ಲ ವನ್ನೆ ಹರಿಸಿ|ನಾಮಸ್ಮರಣೆ ಮಾಡೆಂದೇ|ರಾಮಸ್ಮರಣೆ ಮಾಡೆಂದೇ||
ಸ್ವಾಮಿ ಬ್ರಹ್ಮಚೈತನ್ಯ|ಪ್ರೇಮದಿಂದ ನೋಡೆನ್ನ|
ಸಾಮಿದಾಸ ಬೇಡುವ| ಭಕ್ತಿಯನ್ನು ನೀಡೆಂದು| ಮುಕ್ತಿಯನ್ನು ನೀಡೆಂದು||

೨)
ನಮೋ ದೇವಾ ಸದ್ಗುರುನಾಥ| ನೀನು ಪ್ರತ್ಯಕ್ಷ ರಘುನಾಥ||
ಪತಿತಪಾವನನು ನೀನು| ಮಹಾ ಪತಿತನು ನಾನು||
ದೀನ ಬಂಧುವು ನೀನು| ಬಹು ದೀನನು ನಾನು||
ನೀನು ಶರಣಾಗತ ವತ್ಸಲ| ನಾನು ಶರಣು ಬಂದೆನಲ್ಲಾ||
ಹಾಕಿಕೊಳ್ಳೊ ಪದರಿನೊಳಗೆ| ಅನನ್ಯ ಭಕ್ತಿ ಹಚ್ಚೋ ಎನಗೆ||
ಮಾಡೋ ಭಗವಂತ ನನ್ನ| ಮಹಾಭಾಗವತನನ್ನ||

೩)
ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ||
ನಿತ್ಯ ನಿರಂಜನ|ಸತ್ಯ ಸ್ವರೂಪ| ಭಕ್ತೋದ್ಧಾರ ಜಗಮಾನ್ಯ||
ಮಾನಗಂಗಾ ತಟದಲ್ಲಿ| ಗೋಂದಾವಳಿಯ ಪುರದಲ್ಲಿ|
ಗೀತಾಮಾತೆಯ ಗರ್ಭದಲಿ| ಜನಿಸಿದೆ ಗಣಪತಿ ನಾಮದಲಿ||
ಅಜ್ನಾನಾದಿಗಳ್ ನೀಗಿಸುತ| ಸುಜ್ನಾನವನೇ ಬೋಧಿಸುವ||
ನೇಮದಿ ನಾಮದ ತಾರಕವ| ಸಾರುತ ಜಗವನು ಪೊರೆಯುತಿಹ||
ಬ್ರಹ್ಮಾನಂದ ಪೂಜಿತನ| ಬ್ರಹ್ಮಸ್ವರೂಪಿ ಮಾರುತಿಯ||
ಭವಸಾಗರವ ದಾಟಿಸುವ| ಅಭಯವ ನೀಡಿ ಪೊರೆಯುತಿಹ||

2 comments:

Nani said...

Bhajane is very nice

kavya yn said...

want to here some audios of bhajane