Tuesday, March 31, 2009

ಶ್ರೀ ರಾಮದಾಸೀ ಭಿಕ್ಷೆ

ಶ್ರೀ ರಾಮದಾಸೀ ಭಿಕ್ಷ.

ಹತ್ತೂ ಜನರಲ್ಲಿ ಬೇಡಿ ತಂದ ಭಿಕ್ಷೆಯಿಂದ ಮಂದಿರಗಳನ್ನು ಅಥವಾ ಮಠಗಳನ್ನು ನಡೆಸುವುದನ್ನು ಶ್ರೀ ಮಹಾರಾಜರು ಶ್ರೀ ಸಮರ್ಥ ರಾಮದಾಸರಿಂದ ಬಳುವಳಿಯಾಗಿ ಪಡೆದಿದ್ದರೆನಿಸುತ್ತದೆ. ಶ್ರೀ ಸಮರ್ಥ ರಾಮದಾಸರ ಪಂಥದಲ್ಲಿ ಭಿಕ್ಷೆ ಬೇಡುವುದನ್ನು ಒಂದು ಪ್ರಮುಖ ಅಂಗವಾಗಿ ಪರಿಗಣಿಸಿದ್ದರು. ಸಮರ್ಥರ ದೃಷ್ಟಿಕೋಣದಲ್ಲಿ ಭಿಕ್ಷೆಯೆಂದರೆ ಬರೀ ಬೇಡುವುದಲ್ಲ. ಶ್ರೀ ಸಮರ್ಥರ ಪ್ರಕಾರ ಭಿಕ್ಷೆ ಬೇಡುವುದರಲ್ಲಿ ನಾಲ್ಕು ಪ್ರಮುಖ ನಿಯಮಗಳಿವೆ.೧. ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಇಚ್ಛಿಸಿ ಸರ್ವಸಂಗ ಪರಿತ್ಯಾಗಿ ಆದವನು ಭಿಕ್ಷೆ ಬೇಡಬಹುದು.೨. ಭಗವಂತನೇ ತನ್ನನ್ನು ಕಾಯುತ್ತಿರುವನು ಎಂದು ಧೃಢವಾಗಿ ನಂಬಿರುವವನು ಭಿಕ್ಷೆ ಬೇಡಬಹುದು.೩. ಭಿಕ್ಷೆಯಿಂದ ವೈರಾಗ್ಯ ಮೂಡುವುದು.೪. ಸಾಧಕರು ಸಾಮಾಜಿಕ ಹಿತವನ್ನು ಬಯಸಿ ಯಾವುದಾದರೂ ಕಾರ್ಯಕೈಗೊಂಡಾಗ ಅದಕ್ಕಾಗಿ ಭಿಕ್ಷೆ ಬೇಡಬಹುದು.

-----------ಡಾ. ಸೌ// ಆಶಾಪರಾಂಜಪೆ ರವರ " ಆನಂದಘನರಾಮ" ಪುಸ್ತಕದಿಂದ.

No comments: