Friday, January 8, 2010

ಅಮೃತವಾಣಿ

ಅಮೃತವಾಣಿ - ಒಂದು ಸ್ವಂತ ವಿಷಯದಲ್ಲಿ


ಶ್ರೀ ರಾಮ ಸಮರ್ಥ
ಅಮೃತವಾಣಿ - ಒಂದು ಸ್ವಂತ ವಿಷಯದಲ್ಲಿ

ಪ್ರಶ್ನೆ ೧: ನೀವು ನಿಮ್ಮನ್ನು ಏನೆಂದು ತಿಳಿದುಕೊಂಡಿರುವಿರಿ? ಜನರಿಗೆ ಏನೆಂದು ಉಪದೇಶ ಮಾಡುತ್ತೀರಿ?
ಉತ್ತರ: ನೀವು ನನ್ನನ್ನು ಏನೆಂದು ತಿಳಿದುಕೊಂಡಿರುವಿರೊ ನಾನು ಅದೇನೂ ಆಗಿರುವುದಿಲ್ಲ. ನಿಮ್ಮ ಕಲ್ಪನೆಗಳು ಎಲ್ಲಿ ಮುಗಿಯುತ್ತ್ವವೆಯೊ ನಾನು ಅಲ್ಲಿ ಇರುತ್ತೇನೆ. ಆದರೆ ಈಗ ನಾನು ನಿಮ್ಮ ಆನಂದದಲ್ಲಿರುತ್ತೇನೆ. ಆನಂದವೆಂದರೆ ಸಮಾಧಾನ.
ನಾನು ಶ್ರೀರಾಮನ ಒಬ್ಬ ಹೀನ ದೀನ ಅಜ್ನ್ಯಾನಿಯಾದ ದಾಸನಾಗಿರುತ್ತೇನೆ. ನಾನು ಜನರಿಗೆ ಉಪದೇಶ ಮಾಡುವುದಿಲ್ಲ. ನಾನಾಗಿಯೇ ಅವರನ್ನು ಕರೆಯುವುದಿಲ್ಲ. ಯಾರು ತಾವಾಗಿಯೇ ಬರುತ್ತಾರೋ ಹಾಗೂ ನನ್ನನ್ನು ಏನಾದರೂ ಕೇಳುತ್ತಾರೊ ಅವರಿಗೆ ನಾನು ಕೇವಲ ಶ್ರೀರಾಮನ ಅಖಂಡ ನಾಮಸ್ಮರಣೆ ಮಾಡಿರೆಂದು ಹೇಳುತ್ತೇನೆ.

ಪ್ರಶ್ನೆ ೨: ನೀವು ಏನು ವ್ಯವಸಾಯ ಮಾಡುತ್ತೀರಿ?
ಉತ್ತರ: ನಾನು ಶ್ರೀರಾಮನ ಅಖಂಡ ನಾಮಸ್ಮರಣೆಯ ವ್ಯವಸಾಯ ಮಾಡುತ್ತೇನೆ.

ಪ್ರಶ್ನೆ ೩: ಮಹಾರಾಜ, ತಮ್ಮ ಬಾಲ್ಯವು ಹೇಗೆ ಕಳೆದಿರುತ್ತದೆ?
ಉತ್ತರ: ಅತ್ಯಂತ ಚಿಕ್ಕ ವಯಸ್ಸಿನಿಂದಲೂ ನನ್ನ ಮೇಲೆ ನಾಮದ ಸಂರಕ್ಷಣೆಯ ಛತ್ರವಿರುತ್ತದೆ. ನನಗೆ ನಾಮ ತೆಗೆದುಕೊಳ್ಳಲು ಯಾರೂ ಹೇಳಿರುವುದಿಲ್ಲ. ನಾನು ಜೊತೆಯಲ್ಲಿ ನಾಮ ತೆಗೆದುಕೊಂಡೇ ಬಂದಿರುತ್ತೇನೆ. ನಮ್ಮ ಅಜ್ಜನದು ನನ್ನ ಮೇಲೆ ಬಹಳ ಪ್ರೇಮವಿದ್ದಿತು. ಆದರೆ ನನಗೆ ಮಾತ್ರ ಒಂದು ನಾಮದ ಹೊರತಾಗಿ ಬೇರೆ ಏನೂ ಸೇರುತ್ತಿರಲ್ಲಿಲ್ಲ. ಹಾಗೂ, ಈಗಲೂ ಸೇರುವುದಿಲ್ಲ. ನಾನು ಏನು ಮಾಡ್ಬೇಕೆಂಬ ವಿಷಯದಲ್ಲಿ ನನಗೆ ಒಳಗಿನಿಂದ ನಾಮವೇ ಮಾರ್ಗದರ್ಶನ ಮಾಡುತ್ತದೆ. ನನಗೆ ನಾಮದಿಂದ ಸೂಚನೆ ಬಂದಿರುವುದರಿಂದಲೇ ನಾನು ಮನೆ ಬಿಟ್ಟಿರುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ಮೇಲೆ ನಾಮದ ಕೃಪೆಯಿರುತ್ತದೆ. ನನಗೆ ನಾಮವೊಂದೆ ಸತ್ಯ ಹಾಗೂ ಉತ್ತಮವಾದದ್ದೆಂದು ಅನಿಸುತ್ತದೆ. ನಾಮವು ಸರ್ವ ಸದ್ಗುಣಗಳ ಭಂಡಾರವಾಗಿದ್ದು, ಅದೆ ನಮ್ಮ ನಿಜವಾದ ಧನವಾಗಿರುತ್ತದೆ. ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದನೊ ಅಲ್ಲಲ್ಲಿಗೆ ನಾಮವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಆದ್ದರಿಂದ ನನಗೆ ಯಾವ ಮನುಷ್ಯನು ಯಾವ ಭೂಮಿಕೆಯಲ್ಲಿ ಇರುತ್ತಿದ್ದನೆಂಬುದು ತಾನಾಗಿಯೇ ತಿಳಿಯುತ್ತಿತ್ತು. ನಾಮದ ಕೃಪೆಯಿಂದಾಗಿ ಆಗ ನನ್ನ ಅವಸ್ಥೆಯು ಹೇಗಿತ್ತೆಂದರೆ ಯಾರ ಹತ್ತಿರ ಯಾವ ವಿದ್ಯೆ ಇರುತ್ತಿತ್ತೊ ಅವರು ಅದನ್ನು ನನಗೆ ತಾವಾಗಿಯೇ ಕರೆದು ಕೊಡುತ್ತಿದ್ದರು. ಆದರೆ ಅವರ ಆ ವಿದ್ಯೆಯಿಂದ ನನಗೆ ಸಮಾಧಾನ ವಾಗುತ್ತಿರಲಿಲ್ಲ. ನಾನು ಅಲ್ಲಿಂದ ಮುಂದೆ ಹೊರಟು ಹೋಗುತ್ತಿದ್ದೆನು. ಆದ್ದರಿಂದ ನನ್ನಲ್ಲಿ ಹಠಯೋಗ, ಮಂತ್ರ ತಂತ್ರ ಪ್ರಯೋಗ ಇದ್ದರೂ ಅವೆಲ್ಲವೂ ನಾಮದ ಮುಂದೆ ಸಪ್ಪಗೆ ಅನಿಸುತ್ತದೆ.

No comments: