Saturday, January 2, 2010

ಅನುಭವ ಹಾಗೂ ಜಾಣತನ - A Story Told By Sri Maharaj


ಅನುಭವ ಹಾಗೂ ಜಾಣತನ
ಒಬ್ಬ ಮನುಷ್ಯನ ತಂದೆ ತಾಯಿಗಳು ಅವನ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರು. ಆದ್ದರಿಂದ ಅವನ ಬಾಲ್ಯವು ಅತ್ಯಂತ ಕಷ್ತ್ದಲ್ಲಿಯೇ ಕಳೆಯಿತು. ಅವನು ಒಂದು ಧರ್ಮಶಾಲೆಯಲ್ಲಿ ಇದ್ದು ವಾರದ ಮನೆಯಲ್ಲಿ ಊಟ ಮಾಡುತ್ತಿದ್ದನು. ಹಾಗೂ ಮುನ್ಸಿಪಾಲಿತಿಯ ಕಂದೀಲಿನ ಕೆಳಗೆ ಅಭ್ಯಾಸ ಮಾಡುತ್ತಿದ್ದನು. ಅವನು ಎಂ.ಎ. ಆದನು. ಅವನಿಗೆ ಉತ್ತಮ ನೌಕರಿ ಸಿಕ್ಕಿತು. ಅವನು ದೊಡ್ಡ ಅಧಿಕಾರಿ ಆದನು. ಸೌಭಾಗ್ಯದಿಂದ ಅವನಿಗೆ ಒಬ್ಬ ಸಾಧುವಿನ ಭೆಟ್ಟಿ ಆಯಿತು. ಸಾಧು ಅವನಿಗೆ "ಯಾವ ಭಗವಂತನು ನಿನಗೆ ಇಂಥ ದಿನಗಳನ್ನು ತಮ್ದುಕೊತ್ತಿರುತ್ತಾನೋ ನೀನು ಅವನನ್ನು ಮರೆಯಬೇಡ. ಪ್ರತಿದಿವಸ ಅವನ ನಾಮಸ್ಮರಣೆ ಮಾಡುತ್ತಾ ಹೋಗು" ಎಂದನು. ಅದಕ್ಕೆ ಅವನು "ನಾನು ನಿವೃತ್ತನಾದ ಮೇಲೆ ನನ್ನ ಎಲ್ಲ ಸಮಯವನ್ನು ಭಗವಂತನ ನಾಮಸ್ಮರಣೆಯಲ್ಲಿ ಕಳೆಯುವವನಿರುತ್ತೇನೆ" ಎಂದನು.
ಅವನು ನಿವ್ರುತ್ತನಾದನು. ಅವನಿಗೆ ನಾಲ್ಕುನೂರು ರೂಪಾಯಿ ನಿವೃತ್ತಿ ವೇತನ ಪ್ರಾಪ್ತವಾಯಿತು. ಕೆಲವು ದಿವಸಗಳಾದ ಮೇಲೆ ಅವನು ಮತ್ತೆ ಆ ಸಾಧುವನ್ನು ಭೆಟ್ಟಿಯಾಗಿ ಅವನಿಗೆ "ನಾನು ಮತ್ತೆ ನೌಕರಿ ಮಾಡಲೇ?" ಎಂದು ಕೇಳಲು, ಆ ಸಾಧುವು ನೌಕರಿ ಮಾಡುವ ಕಾರಣವೇನೆಂದು ಕೇಳಿದನು. ಅದಕ್ಕೆ ಅವನು "ಇವಳು ನನ್ನ ಎರಡನೆಯ ಹೆಂಡತಿ ಇರುತ್ತಾಳೆ. ಇವಳಿಗೆ ನಾಲ್ಕು ಮಕ್ಕಳಿರುತ್ತಾರೆ.ನಾನು ಇವರಿಗಾಗಿ ನೌಕರಿ ಮಾಡಬೇಕಾಗಿರುತ್ತದೆ." ಎಂದನು. ಅದಕ್ಕೆ ಆ ಸಾಧುವು "ಅದೇಕೆ ನಿನ್ನ ಹತ್ತಿರ ದುಡ್ಡು ಇರುವುದಿಲ್ಲವೇ?" ಎಂದು ಕೇಳಲು, ಅದಕ್ಕೆ ಅವನು "ದುಡ್ಡು ಇರುತ್ತದೆ. ನಾನು ಪ್ರತಿಯೊಬ್ಬ ಹುಡುಗನ ಹೆಸರಿನಲ್ಲಿ 1೦೦೦೦ ರೂಪಾಯಿ ಇಟ್ಟಿರುತ್ತೇನೆ. ಆದರೆ ಇಷ್ಟು ದುಡ್ಡು ಅವನಿಗೆ ಹೇಗೆ ಸಾಕಾಗುತ್ತದೆ? ಮುಂದೆ ಅವನದು ಹೇಗೆ ನಡೆದೀತು?" ಎನ್ನಲು ಅದನ್ನು ಕೇಳಿ ಸಾಧು ನಕ್ಕನು. ಹಾಗೂ ಅವನಿಗೆ, "ಅರೆ! ನೀನು ಸ್ವತಃ ಭಿಕಾರಿಯಾಗಿದ್ದಿ. ನಿನ್ನ ಹತ್ತಿರ ಒಂದೂ ದುಡ್ಡು ಇರಲಿಲ್ಲ.ನೀನು ವಾರ ಹಚ್ಚಿಕೊಂಡು ಊಟ ಮಾಡುತ್ತಿದ್ದಿ. ಭಗವಂತನು ನಿನ್ನನ್ನು ಇಷ್ಟು ದೊಡ್ಡವನನ್ನಾಗಿ ಮಾಡಿರುವುದಿಲ್ಲವೇ? ಅಂದ ಮೇಲೆ ಅವನು ನಿನ್ನ ಮಕ್ಕಳನ್ನು ಜೋಪಾನ ಮಾಡುವುದಿಲ್ಲವೇ?" ಎಂದು ಕೇಳಲು ಅದಕ್ಕೆ ಅವನು ಏನೂ ಉತ್ತರ ಕೊಡದೆ ಸುಮ್ಮನೆ ಹೋದನು.

No comments: