Saturday, December 21, 2019

Sri Maharaj's Pravachan in Kannada -Dec.21

ಭಗವಂತನನ್ನು ಪ್ರಪಂಚಕ್ಕಾಗಿ    ಸಾಧನೆ ಮಾಡಿಕೊಳ್ಳಬಾರದು.  
ಒಬ್ಬ ಹುಡುಗನು ಮನೆಯಿಂದ ಓಡಿಹೋದನು. ಆಗ ಅವನ ತಾಯಿಯು "ಅವನು ಎಲ್ಲಿಯೇ ಇರಲಿ, ಆದರೆ ಸುಖವಾಗಿರಲಿ", ಎಂದು ಅಂದಳು. ಅದರಂತೆ ನೀವು ಎಲ್ಲಿಯೇ ಇದ್ದರೂ ನಾಮದಲ್ಲಿರಬೇಕು. ನಾಮವನ್ನು ಅತ್ಯಂತ  ಆಗ್ರಹದಿ   ತೆಗೆದುಕೊಳ್ಳಿರಿ. ಶ್ರದ್ಧೆಯಿಂದ ತೆಗೆದುಕೊಂಡರೆ ಹೆಚ್ಚು ಉತ್ತಮ. ವೃತ್ತಿಗಳನ್ನು ಶಾಂತಗೊಳಿಸಿ   ನಾಮದಲ್ಲಿದ್ದರೆ ಇನ್ನೂ ಹೆಚ್ಚು ಉತ್ತಮ; ವನಸ್ಪ್ಮತಿಯ ಎಲೆಗಳ  ರಸ ತೆಗೆಯುವುದಕ್ಕಾಗಿ, ಕೆಲವು ಎಲೆಗಳಲ್ಲಿ ಜೇನುತುಪ್ಪ ಹಾಕಬೇಕಾಗುತ್ತದೆ. ಕೆಲವು ಎಲೆಗಳಲ್ಲಿ ಹಾಲು, ತುಪ್ಪ ಅಥವಾ ನೀರು ಹಾಕಬೇಕಾಗುತ್ತದೆ. ಅದರಂತೆ ಭಗವಂತನ ಪ್ರೇಮ ಪ್ರಾಪ್ತವಾಗುವುದಕ್ಕಾಗಿ ಹಾಗೂ ನಾಮದಲ್ಲಿ ರುಚಿ ನಿರ್ಮಾಣವಾಗುವುದಕ್ಕಾಗಿ, ಆ ನಾಮದಲ್ಲಿ ಸ್ವಲ್ಪ ಶ್ರದ್ಧೆ ಹಾಕಬೇಕು. "ನಾನು ಬ್ರಹ್ಮ ಇರುತೇನೆ", ಈ ಅನುಭವದಲ್ಲಿಯೂ ಕೂಡ ಅಹಂಭಾವ ಇರುತ್ತದೆ. ನಾಮವು ಅದಕ್ಕೂ ಆಚೆಗೆ ಇರುತ್ತದೆ. ಆದ್ದರಿಂದ ಭಗವಂತನ ನಾಮಸ್ಮರಣೆ ನಿರಂತರ ಮಾಡಬೇಕು; ಅದರಿಂದ ಪ್ರಪಂಚವು ಸುಲಭವಾಗುತ್ತದೆ. ನಾಮದ ಸತ್ತೆಯು ಅತ್ಯಂತ ಬಲವತ್ತರವಾಗಿರುತ್ತದೆ.  ಜಗತ್ತಿನಲ್ಲಿ ಎಂಥ ಪಾಪವೂ ನಾಮದ ಮುಂದೆ ನಿಲ್ಲಲು ಶಕ್ಯವಾಗುವುದಿಲ್ಲ. ನಾಮವು ಭಗವಂತನ ಶತ್ರುವಿಗೂ ಸಹಾಯ ಮಾಡುತ್ತದೆ. ಅಂದಮೇಲೆ ನಮಗೆ ಸಹಾಯ ಮಾಡೇ ಮಾಡುತ್ತದೆ. ರೂಪದ ಧ್ಯಾನವು ಮನಸ್ಸಿನಲ್ಲಿ ಬರದೆ ಇದ್ದರೂ ನಾಮ ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ಸತ್ಯಕ್ಕೆ ಏನಾದರೂ ರೂಪ ಕೊಡದ ಹೊರತು ನಮಗೆ ಅದರ ಅನುಸಂಧಾನ ಇತ್ತು ಕೊಳ್ಳ ಲಿಕ್ಕಾಗುವುದಿಲ್ಲ.. ನಾಮವು ಅದರ ರೂಪವಾಗಿರುತ್ತದೆ. ಆದ್ದರಿಂದ ನಾಮದ ನಿರಂತರ ಅನುಸಂಧಾನವಿರಬೇಕು. ಭಗವಂತನ ನಾಮದಲ್ಲಿ ಪ್ರತಿಫಲದ ಅಪೇಕ್ಷೆ ಇರುವುದಿಲ್ಲ. ಆದ್ದರಿಂದ ಅದು ಅಪೂರಣವಾಗಿರುವುದಿಲ್ಲ. ದಡ್ಡ ಜನರಿಗೆ ನಾಮ ತೆಗೆದುಕೊಳ್ಳಲು ಹೇಳಿದರೆ ಅವರು ಕೂಡಲೇ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ವಿದ್ವಾಂಸರು ಮಾತ್ರ " ನಾಮದ ಪ್ರೇಮ ವಿದ್ದ್ದರೆ   ನಾನು ನಾಮ ತೆಗೆದುಕೊಳ್ಳುತ್ತೇನೆ." ಎಂದು ಅನ್ನುತ್ತಾರೆ. ವಿಷಯರೂಪೀ ಸರ್ಪದ ವಿಷವು ಇಳಿದಿರದಿದ್ದರೆ ಭಗವಂತನ  ಅಮೃತದಂತೆ  ಮಧುವಾಗಿರುವ  ನಾಮವು ನಮಗೆ ರುಚಿಸಲಾರದು. ಇದಕ್ಕಾಗಿ ಈ ಕ್ಷಣದಿಂದಲೇ ನಾಮ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ನಾವು ರಾಮನವರಾಗಬೇಕು ಹಾಗೂ ಅವನಿಗೆ ಏನು ಸೇರುತ್ತದೆಯೋ ಅದನ್ನು ಮಾಡಬೇಕು. ಭಗವಂತನಿಗೆ ಬುಧ್ಧಿ ವಂತಿಕೆ ಯಿಂದ  ಶರಣು ಹೋಗದೆ   ಅಜ್ನ್ಯಾನದ ಭಾವದಿಂದ ಶರಣು ಹೋಗಬೇಕು. ಭಗವಂತನಿಗೆ ಅನನ್ಯವಾಗಿ ಶರನುಹೋಗಿ ಅನುಭವ ಪಡೆಯಬೇಕು. ನೀತಿಯಿಂದ ನಡೆಯಬೇಕು. ಭಕ್ತಿ ಮಾಡಬೇಕು. ಅಂದರೆ ಭಗವಂತನು ಪ್ರಸನ್ನನಾಗುತ್ತಾನೆ.

   ಜ್ನ್ಯಾನವು  ಶ್ರೇಷ್ಠ ವಾದದ್ದೇನೋ ನಿಜ. ಆದರೆ ಅದು ಭಕ್ತಿಯ ಹೊರತಾಗಿ ಜೀವಮ್ತವಾಗಿರಲಾರದು. ಏಕೆಂದರೆ ಭಗವಂತನಿಂದ ಎಂದೂ ವಿಭಾಕ್ತನಾಗದಿರುವವನೆ ಭಕ್ತನಾಗಿರುತ್ತಾನೆ ಹಾಗೂ ಅದು ಭಕ್ತಿಯ  ಆಧಾರದಿಂದಲೇ ಉಳಿಯುತ್ತದೆ. ನಿಜವಾದ ಭಕ್ತನು ಜ್ನ್ಯಾನಿಯೇ ಆಗಿರುತ್ತಾನೆ. ಭಗವಂತನಿಗಾಗಿಯೇ ಭಗವಂತನು ಬೇಕೆಂದು ಭಕ್ತಿ ಮಾಡುವವರು ಲಕ್ಷದಲ್ಲಿ ಒಬ್ಬರು. ಇದೇ ನಿಜವಾದ  ಭಕ್ತಿಎಂದು ತಿಳಿಯಬೇಕು. ನಾಮಕ್ಕಾಗಿಯೇ ನಾವು ನಾಮ ತೆಗೆದುಕೊಳ್ಳಬೇಕು. ರಾಮನು ಇತ್ತದ್ದರಲ್ಲಿಯೇ ಸಮಾಧಾನ ಹೊಂದಬೇಕು. ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೂಳಬಾರದು. ಅವನು ಸಾಧ್ಯನಾಗಿರಬೇಕು. ಯಾರು ಭಗವಂತನ ನಾಮದಲ್ಲ್ಲಿ ತಮ್ಮ ಆಯುಷ್ಯವನ್ನು ಕಳೆದಿರುವರೋ, ಅವರು ಹುಟ್ಟಿ ಬಂದು ಎಲ್ಲವನ್ನೂ ಸಾಧಿಸಿದರು.ಹಾಗೂ ಜೀವನವನ್ನು ಸಾರ್ಥಕ ಮಾಡಿಕೊಂಡರು.

2 comments:

Swarna said...

ನಮಸ್ಕಾರ ಸರ್.

ಈ ಮೊದಲೇ ತಿಳಿಸಿದ ಹಾಗೆ, ಚಿಂತಾಮಣಿಯಲ್ಲಿ ಮಹಾರಾಜರನ್ನು
ಆರಾಧನೆಯ ಸಮಯದಲ್ಲಿ ನೋಡಲಿಕ್ಕಾಗಿ,
ನಾವುಗಳು ಕುಟುಂಬದೊಡನೆ ೨೬ನೇ ತಾರೀಕಿಗೆ ಚಿಂತಾಮಣಿ
ಮಂದಿರಕ್ಕೆ ಬರೋಣವೆಂದು ಪ್ಲಾನ್ ಮಾಡಿದ್ದೇವೆ.
ಬಂದಮೇಲೆ ಅಲ್ಲಿ ನಿಮ್ಮನ್ನು ಕಾಣಬಹುದೇ, ದಯವಿಟ್ಟು ತಿಳಿಸಿ.
(ನಿಮ್ಮ ನಂಬರ್ ಕೊಡಲು ಸಾಧ್ಯವೇ?)
ನಮ್ಮೊಂದಿಗೆ ಒಂದೂವರೆ ವರ್ಷದ ಮಗುವಿದೆ. ಅದಕ್ಕಾಗಿ ನಾವು
ಯಾವುದಾದರು ವ್ಯವಸ್ಥೆ ಮಾಡಿಕೊಳ್ಳಬೇಕೆ ದಯಮಾಡಿ ತಿಳಿಸಿ.
ಧನ್ಯವಾದಗಳೊಂದಿಗೆ
Swarna

Raghunath said...

Namasthe, Madame.
I couldn't write in Kannada in this space.
Please do come as per your plan. Accommodation is no problem.On 26th,if you come in the morning before 9 a.m. you can do abhisheka to Sri Ramachandra murthi in Dhyana Mandir. Please phone one day in advance so that a room will be reserved for you.My phone No.is 9880218777.