Tuesday, June 20, 2023
ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ
ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ |
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||
ಹಿಂದೆ ಅಜಾಮಿಳ | ಕಂದಾ ಪ್ರಹ್ಲಾದನು| ನಾರೀ ಶಿರೋಮಣಿ ದ್ರೌಪದಾದೇವಿಯು |
ಭಕ್ತಿ ಭಾವದಿಂದ ಭಜಿಸಿ| ಹರಿಯ ಕೊಂಡಾಡುತ | ಮುಕ್ತರಾಗಿ ಹೋದರೈ ಭಕ್ತಿ ಪಥವ ತೋರುತ ||
ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ |
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||
ಚೈತನ್ಯ ಮೀರಾ| ಕನಕ ಕಬೀರಾ|ಶ್ರೀ ರಾಮದಾಸ | ಶ್ರೀ ತುಕಾರಾಮ |
ರಾಮಕೃಷ್ಣ ಹರಿವಿಠಲ್ ಎಂದು ಕೊಂಡಾಡುತ |
ಘೋರ ಸಂಸಾರ ತಾಪ ಮೀರಿ ಸುಖಿಯಾ ಆದರೈ |
ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ |
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||
ಗೋಂದಾವಳೀ ವಾಸಿ ಶ್ರೀ ಬ್ರಹ್ಮಚೈತನ್ಯ| ಶ್ರೀ ಗುರುನಾಥನು| ಸದ್ಗುರು ನಾಥನು\
ಬೋಧಿಸಿದ ಬೋಧವೂ| ವೇದಗಳ ಸಾರವು|
ಇದೇ ನಮ್ಮ ವೇದವುಇದಕ್ಕಿಲ್ಲ ಭೇದವು ||
ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ |
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ
ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||
Subscribe to:
Post Comments (Atom)
No comments:
Post a Comment