ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ |
ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ ||
ಮಾಣಗಂಗಾ ತಟದಲ್ಲಿ | ಗೋಂದಾವಳಿಯ ಪುರದಲ್ಲಿ |
ಗೀತಾಮಾತೆಯ ಗರ್ಭದಲಿ | ಜನಿಸಿದೆ ಗಣಪತಿ ನಾಮದಲಿ |
ಅಜ್ಞಾನಾದಿಗಳ್ ನೀಗಿಸುತ | ಸುಜ್ಞಾನವನೇ ಬೋಧಿಸುವ |
ನೇಮದಿ ನಾಮದ ತಾರಕವ| ಸಾರುತೆ ಜಗವನು ಪೊರೆಯುತಿಹ||
. ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ |
ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ
ಬ್ರಹ್ಮಾನಂದ ಪೂಜಿತನ | ಬ್ರಹ್ಮಸ್ವರೂಪಿ ಮಾರುತಿಯ |
ಭವಸಾಗರವ ದಾಟಿಸುವ ಅಭಯವ ನೀಡಿ ಪೊರೆಯುತಿಹ ||
. ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ |
ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ
No comments:
Post a Comment