Friday, June 16, 2023
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ
ಶಾಂತರೂಪಯನ್ನಂತರಂಗದಿ ಸಂತತ ವಾಸಿಸುವೀ| ಗುರುವರ ಸಂತತ ವಾಸಿಸುವೀ|
ಸಂತ ಮಕುಟಮಣೀ ಶಾಂತಿಸಾಗರಾ ಭ್ರಾಂತಿಯ ಛೇದಿಸುವೀ |
ಯೋಗಿವರ್ಯ ಶ್ರೀ ಬ್ರಹ್ಮಚೈತನ್ಯರ ಚರಣವ ಪೂಜಿಸಿದೀ| ಗುರುವರ ಚರಣವ ಪೂಜಿಸಿದೀ
ಯೋಗದಂಡ ಸತ್ತುಲಸೀಮಾಲೆಯ ಕೊರಳೊಳು ಧರಿಸಿದೆನೀ |
ವೇಣುನಗರದಿ ರಾಮನಾಮದ ಯಜ್ಞವಮಾಡಿಸಿದೀ | ಗುರುವರ ಯಜ್ಞವ ಮಾಡಿಸಿದೀ || ಗುರುವರ ಯಜ್ಞವ ಮಾಡಿಸಿದೀ| ಉಣೇ ಇಲ್ಲದೇ ಮಂಟಪದಿಂದಲಿ ಅಸುರನ ದೂಡೀದಿ|
ಬಾಧೆಯಿಂದ ಬಳಲುವ ವೆಂಕಟನ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ|
ಮೋದವಿತ್ತು ಸತ್ಪುತ್ರಗೆ ನಿತ್ಯಾನಂದವ ಪೊಂದಿಸಿದೀ ||
ಮಂದಹಾಸದಿ ಸದ್ಗುರುವರ್ಯರ ಪದದ್ವಂದ್ವ ನಂಬಿದೆನು | ಗುರುವರ ಪದದ್ವಂದ್ವವ ನಂಬಿದೆನು|
ಇಂದು ಸಚ್ಚಿದಾನಂದ ಸಮರ್ಥ ಬೆಳಗುವೆನಾರತಿಯಾ| ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ
ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ
Subscribe to:
Post Comments (Atom)
No comments:
Post a Comment